ಗಾಂಧಿನಗರ, ಮೇ 29(DaijiworldNews/AA): ರಾಜ್ಕೋಟ್ ಗೇಮ್ ರೋನ್ ಅಗ್ನಿ ಅವಘಡದಲ್ಲಿ ಮೃತಪಟ್ಟ 27 ಮಂದಿಯ ಪೈಕಿ ಟಿಆರ್ಪಿ ಗೇಮ್ನ ಸಹಪಾಲುದಾರನೂ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಅಗ್ನಿ ದುರಂತದಲ್ಲಿ ಮೃತಪಟ್ಟ 27 ಜನರ ಗುರುತು ಪತ್ತೆ ಕಾರ್ಯ ನಡೆಯುತ್ತಿದ್ದು ಡಿಎನ್ಎ ಮಾಡಲಾಗುತ್ತಿದ್ದು, ಸದ್ಯ 20 ಶವಗಳ ಗುರುತು ಪತ್ತೆ ಮಾಡಲಾಗಿದೆ. ಜೊತೆಗೆ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. ಈ ಪೈಕಿ ಸಹಮಾಲೀಕ ಪ್ರಕಾಶ್ ಹಿರೇನ್ ಅವರು ಸಾವನ್ನಪ್ಪಿರುವುದಾಗಿ ಡಿಎನ್ಎ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕಾಶ್ ಸಹೋದರ ಪ್ರಕಾಶ್ ಕಾಣೆಯಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ಗೇಮ್ ರೋನ್ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅವರು ಸತ್ತಿದ್ದಾರೆ ಎಂದು ಪೊಲೀಸರು ದೃಢಪಡಿಸಿದ್ದಾರೆ.
ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, 25 ಜನರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದೆ. ಈಗಾಗಲೇ ಗೇಮ್ ಝೋನ್ನ ಮಾಲೀಕರಾದ ಯುವರಾಜ್ ಸಿನ್ಹಾ ಸೋಲಂಕಿ ಹಾಗೂ ರಾಹುಲ್ ರಾಥೋಡ್ ಮತ್ತು ಸಹಪಾಲುದಾರ ದಾವಲ್ ಥಕ್ಕರ್ ಎಂಬುವವರನ್ನು ಬಂಧಿಸಲಾಗಿದ್ದು, ಅವರನ್ನು ಜೂನ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.