ಅಯೋಧ್ಯೆ, ಮೇ 26 (DaijiworldNews/AA): ಇತ್ತೀಚೆಗೆ ನಿರ್ಮಾಣವಾದ ಅಯೋಧ್ಯೆಯ ರಾಮಮಂದಿರದ ಆವರಣ ಮತ್ತು ಮಂದಿರದ ಒಳಗೆ ಮೊಬೈಲ್ ಬಳಕೆ ಮಾಡುವಂತಿಲ್ಲ. ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್ ಶನಿವಾರ ಆದೇಶ ಹೊರಡಿಸಿದೆ.
ರಾಮಮಂದಿರ ಟ್ರಸ್ಟ್ ನ ಪದಾಧಿಕಾರಿಗಳು ಐಜಿ ಹಾಗೂ ಕಮಿಷನರ್ ಜೊತೆಗಿನ ಸಭೆ ನಡೆಸಲಾಗಿದ್ದು, ಈ ಸಭೆಯಲ್ಲಿ ಸಂಪೂರ್ಣವಾಗಿ ನಿಷೇಧಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ದೇವಸ್ಥಾನಕ್ಕೆ ಸಾರ್ವಜನಿಕರು ಮೊಬೈಲ್ ಕೊಂಡೊಯ್ಯುವುದಕ್ಕೆ ಈಗಾಗಲೇ ನಿಷೇಧ ಹೇರಲಾಗಿತ್ತು. ಆದರೀಗ ವಿಐಪಿಗಳು ಮತ್ತು ವಿವಿಐಪಿಗಳೂ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ದೇವಸ್ಥಾನದ ಟ್ರಸ್ಟ್ ನ ಟ್ರಸ್ಟಿ ರಾಮ ಮಂದಿರಕ್ಕೆ ಬರುವ ಭಕ್ತರ ಮೊಬೈಲ್ಗಳನ್ನು ಇಡಲು ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಜನರು ತಮ್ಮ ಮೊಬೈಲ್ ಜೊತೆಗೆ ಇತರ ಬೆಲೆಬಾಳುವ ವಸ್ತುಗಳನ್ನು ಇಟ್ಟುಕೊಳ್ಳಬಹುದು. ಇಂತಹ ಪರಿಸ್ಥಿತಿಯಲ್ಲಿ ಜನರು ಈ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ದೇವಸ್ಥಾನದ ಆವರಣದಲ್ಲಿ ಸುವ್ಯವಸ್ಥೆ ಕಾಪಾಡಲು ಟ್ರಸ್ಟ್ ಗೆ ಸಹಕರಿಸಬೇಕು. ಭಕ್ತರು ಲಾಕರ್ ಸೌಲಭ್ಯ ಪಡೆದು ತಮ್ಮ ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳನ್ನು ಅದರಲ್ಲಿಟ್ಟು ದರ್ಶನ ಪಡೆಯಬಹುದಾಗಿದೆ ಎಂದು ತಿಳಸಿದ್ದಾರೆ.