ಬೆಂಗಳೂರು, ಮೇ.1(DaijiworldNews/AK): ಬರದಿಂದ ಕಂಗೆಟ್ಟ ರೈತರ ಅಳಲು ಒಂದೆಡೆಯಾದರೆ, ಹಾಲು ಉತ್ಪಾದಕರ ಸಬ್ಸಿಡಿಯನ್ನೂ ಕೂಡ ಕೊಡದೇ ದೋಖಾ ಕಾಂಗ್ರೆಸ್ ಸರ್ಕಾರ ಮೋಸ ಮಾಡುತ್ತಿದೆ. ಸರ್ಕಾರದ ಈ ನಡೆ ಖಂಡನೀಯ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ
ಕಿಡಿಕಾರಿದ್ದಾರೆ.
ಹಾಲಿನ ಸಬ್ಸಿಡಿಗೆ ಸಂಬಂಧಿಸಿ ಎಕ್ಸ್ ನಲ್ಲಿ ಪೋ ಸ್ಟ್ ಮಾಡಿದ ಅವರು, ಹಾಲು ಉತ್ಪಾದಕರ ಸಬ್ಸಿಡಿ ಹಣ 700 ಕೋಟಿ ರೂ. ಬಾಕಿ ಉಳಿಸಿಕೊಂಡಿರುವ ರಾಜ್ಯ ಸರ್ಕಾರದ ಆತ್ಮಸಾಕ್ಷಿ ಸತ್ತು ಹೋಗಿದೆಯಾ ಎಂದು ಪ್ರಶ್ನಿಸಿದ್ದಾರೆ.ಕೃಷಿ ಅನುದಾನಕ್ಕೆ ಶೇ 32ರಷ್ಟು ಕತ್ತರಿ ಹಾಕಿದ್ದಾಯಿತು. ಈಗ ಹೈನುಗಾರರ ಸಬ್ಸಿಡಿಗೂ ಪಂಗನಾಮ ಹಾಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದು ಲೀ ಟರ್ ಹಾಲಿನ ಸಬ್ಸಿಡಿಯನ್ನು 7 ರೂ. ಹೆಚ್ಚಿಸುತ್ತೇವೆ ಎಂದು ಚುನಾವಣೆ ವೇಳೆ ಕಾಂಗ್ರೆಸ್ ಸುಳ್ಳು ಹೇ ಳಿದ್ದೇ ಹೇ ಳಿದ್ದು. ಹೆಚ್ಚಿಸುವ ಮಾತಿರಲಿ, ಇದ್ದ ಸಬ್ಸಿಡಿಯನ್ನೂ ಕೊಡದೇ 7 ತಿಂಗಳಿಂದ ಸತಾಯಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಗೋವಿನ ಆಹಾರವಾದ ಹಿಂಡಿ, ಬೂಸಾ ಬೆಲೆ ಗಗನಕ್ಕೇರಿದೆ. ಮೇವೂ ಸಿಗುತ್ತಿಲ್ಲ. ಹೀಗಿರುವಾಗ ಕಡು ಸಂಕಷ್ಟದಲ್ಲಿರುವ ಹಾಲು ಉತ್ಪಾದಕರಿಗೆ ಕೂಡಲೇ ರಾಜ್ಯ ಸರ್ಕಾರ ಸಬ್ಸಿಡಿ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.