ರಾಯಚೂರು, ಏ.28(DaijiworldNews/AA): ನರೇಂದ್ರ ಮೋದಿ ಪ್ರಧಾನ ಮಂತ್ರಿ ಅಲ್ಲ, ಪ್ರಧಾನ ಸುಳ್ಳುಗಾರ. ಅವರ ಪ್ರಣಾಳಿಕೆಯಲ್ಲಿ ಅಮೃತ್ ಕಾಲ್ ಎಂದು ಹೇಳಿದ್ದಾರೆ. ಆದರೆ ಇದು ಅನ್ಯಾಯದ ಕಾಲ ಎಂದು ಕಾಂಗ್ರೆಸ್ ಮುಖಂಡ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.
ರಾಯಚೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಮೋದಿ ಈ ಹಿಂದೆಯೂ ಅಚ್ಛೇ ದಿನ್ ಎಂದು ತಿಳಿಸಿದ್ದರು. ಯುವಕರಿಗೆ ಸ್ಕಿಲ್ ಇಂಡಿಯಾ ಎಂದು ಹೇಳಿದರು. ಮೇಕ್ ಇನ್ ಇಂಡಿಯಾ ಅಂತಾ ಮಾಡಿದರು. ಆತ್ಮನಿರ್ಭರ್ ಅಂತಾ ಹೇಳಿದ್ರೂ ಏನೂ ಉಪಯೋಗ ಆಗಿಲ್ಲ. ಫಾರ್ಮರ್ ಹಬ್, ಹಾರ್ಟಿಕಲ್ಚರ್ ಹಬ್ ಮಾಡುತ್ತೇವೆ ಎಂದಿದ್ದರು. ಆದರೆ ಇದು ಅಮೃತ ಕಾಲ ಅಲ್ಲ, ಇದು ಅನ್ಯಾಯದ ಕಾಲವೆಂದು ಹೇಳಿದ್ದರು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಜನರ ಪರಿಸ್ಥಿತಿ ತಿಳಿದು ಪ್ರಣಾಳಿಕೆ ಬಿಡುಗಡೆ ಮಾಡಿದೆ. ಖರ್ಗೆ ನೇತೃತ್ವದಲ್ಲಿ 5 ಪ್ರಮುಖ ಅಂಶಗಳೊಂದಿಗೆ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದೇವೆ ಎಂದು ತಿಳಿಸಿದರು.