ಬೆಂಗಳೂರು, ಏ.27(DaijiworldNews/AA): ಕೇಂದ್ರ ಸರ್ಕಾರ ಈಗ ಕೊಟ್ಟಿರುವ ಬರಿ ಪರಿಹಾರವೇ ಸಾಕು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ನೀವೊಬ್ಬ ನಾಡದ್ರೋಹಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ 3,454 ಕೋಟಿ ರೂ. ಬರ ಪರಿಹಾರ ನೀಡಿದ್ದೇವೆ ಎಂಬ ಪತ್ರ ಬಂದಿದೆ. ಆದರೆ ಹಣ ಖಾತೆಗೆ ಯಾವಾಗ ಜಮೆ ಆಗುತ್ತದೆ ಎಂದು ತಿಳಿದಿಲ್ಲ. ಕೇಂದ್ರ ಹಣ ಜಮೆ ಮಾಡಲಿ ಬಿಡಲಿ ನಮ್ಮ ಕೆಲಸ ನಾವು ಮಾಡುತ್ತಿದ್ದೇವೆ. ಇದು ರಾಜಕೀಯ ವಿಚಾರವಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುತ್ತಿದ್ದೇವೆ ಎಂದರು.
ಇನ್ನು ಕೆಲ ರಾಜಕಾರಣಿಗಳು ಹೇಳುತ್ತಾರೆ, ಸಾಕು ಬಿಡಿ ಈಗ ಕೊಟ್ಟಿರೋ ಪರಿಹಾರ ಅಂತಾರೆ. ಅದೇನು ಇವರ ಮನೆ ಆಸ್ತಿನಾ? ದೇಶಕ್ಕಲ್ಲ, ರಾಜ್ಯಕ್ಕೆ ಇವರು ದ್ರೋಹಿಗಳು. ಕುಮಾರಸ್ವಾಮಿ ಹೇಳಿದ್ದರಂತೆ, ಸಾಕು ಬಿಡಿ ಕೊಟ್ಟಿರುವುದು ಅಂತಾ. ನೀನೊಬ್ಬ ನಾಡದ್ರೋಹಿ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.