ನವದೆಹಲಿ, ಏ. 24(DaijiworldNews/AK): ಸಂಪತ್ತು ಮರುಹಂಚಿಕೆಯ ಭರವಸೆ ಕುರಿತು ಬಿಜೆಪಿ ವಾಗ್ದಾಳಿ ನಡೆಸುವ ಬೆನ್ನಲ್ಲೇ ಜಾತಿಗಣತಿಯು ತಮ್ಮ ಜೀವನದ ಗುರಿಯಾಗಿದ್ದು, ಅದನ್ನು ಯಾವ ಶಕ್ತಿಯೂ ತಡೆಯಲಾರದು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಹೇಳಿದ್ದಾರೆ.
ಸಾಮಾಜಿಕ ನ್ಯಾಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ಜಾತಿಗಣತಿಯ ಎಕ್ಸ್-ರೇಗೆ (ಸಂಪತ್ತು ಮರುಹಂಚಿಕೆ) ತಮ್ಮನ್ನು ತಾವು ದೇಶಭಕ್ತರು ಎಂದು ಹೇಳಿಕೊಳ್ಳುವವರು ಹೆದರಿದ್ದಾರೆ ಎಂದ ಅವರು, ಜಾತಿಗಣತಿ ನನ್ನ ಜೀವನದ ಗುರಿಯಾಗಿದ್ದು, ಯಾವ ಶಕ್ತಿಯಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.
ಅಲ್ಲದೇ ನಮ್ಮ ಸರ್ಕಾರ ರಚನೆಯಾಗುತ್ತಿದ್ದಂತೆ ನಾವು ಮಾಡುವ ಮೊದಲ ಕೆಲಸವೇ ಜಾತಿಗಣತಿಯಾಗಿರುತ್ತದೆ. ಮೋದಿ 16 ಲಕ್ಷ ಕೋಟಿ ರೂ ಕೆಲವೇ ವ್ಯಕ್ತಿಗಳಿಗೆ ವರ್ಗಾವಣೆ ಮಾಡಿದ್ದಾರೆ. ಈ ಪೈಕಿ ಚಿಕ್ಕ ಮೊತ್ತವನ್ನು ಶೇ.90 ಜನರಿಗೆ ವಾಪಸ್ ನೀಡುತ್ತೇ ವೆ ಎಂದು ರಾಹುಲ್ ಗಾಂಧಿ ಭರವಸೆ ನೀಡಿದರು. ನನಗೆ ನ್ಯಾಯದಲ್ಲಿ ಆಸಕ್ತಿ ಇದೆಯೇ ಹೊರತು ಜಾ ತಿಯಲ್ಲಿ ಅಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.