ಹುಬ್ಬಳ್ಳಿ, ಏ. 23(DaijiworldNews/AK): ನೇಹಾ ಕೊಲೆ ಪ್ರಕರಣದಿಂದ ಮತದಾರರು ತಿರುಗಿ ಬೀಳುವ ಭಯದಿಂದ ಸಾಂತ್ವನದ ನಾಟಕವಾಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ನೇಹಾ ಕೊಲೆ ನಡೆದು ನಾಲ್ಕು-ಐದು ದಿನಗಳ ನಂತರ ಕಾಂಗ್ರೆಸ್ ಅನುಕಂಪ ತೋರುತ್ತಿದೆ. ಸಿಎಂಗೆ ನೇಹಾ ಕುಟುಂಬದ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ, ಪ್ರಕರಣ ನಡೆದ ದಿನವೆ ನೇರವಾಗಿ ನೇಹಾ ತಂದೆ ನಿರಂಜನಯ್ಯ ಅವರಿಗೆ ಕರೆ ಮಾಡಿ ಸಾಂತ್ವನ, ಧೈರ್ಯ ನೀಡಿರುತ್ತಿದ್ದರು. ರಾಜಕೀಯವಾಗಿ ಕಾಂಗ್ರೆಸ್ಗೆ ಆಗುತ್ತಿರುವ ನಷ್ಟ ತುಂಬಿಸಿಕೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಾಂತ್ವನದ ನಾಟಕವಾಡಿದ್ದಾರೆ ಎಂದು ಟೀಕಿಸಿದರು.
ನೇಹಾ ಮನೆಗೆ ಸಚಿವ ಸಂತೋಷ ಲಾಡ್, ಲಕ್ಷ್ಮಿ ಹೆಬ್ಬಾಳ್ಕರ್ ಭೇ ಟಿ ನೀಡಿದಾಗ, ಮುಖ್ಯಮಂತ್ರಿ ದೂರವಾಣಿಯಲ್ಲಿಯಲ್ಲಿ ಮಾತನಾಡ ಬಹುದಿತ್ತು. ಅದು ಬಿಟ್ಟು, ಸಚಿವ ಎಚ್.ಕೆ. ಪಾಟೀ ಲ ಅವರನ್ನು ಕಳುಹಿಸಿ, ಫೋನ್ ಸಾಂತ್ವನ ಹೇ ಳಬೇ ಕಿತ್ತೆ ಎಂದು ಜೋಶಿ ಪ್ರಶ್ನಿಸಿದರು.
'ನೇಹಾ ಕೊಲೆ ಪ್ರಕರಣದಲ್ಲಿ ನಾವು ರಾಜಕೀಯ ಮಾಡುತ್ತಿಲ್ಲ. ಹಿಂ ದೂ - ಮುಸ್ಲಿಮ್ ಭೇ ದವಿಲ್ಲದೆ,ಯಾರಿಗೇ ಅನ್ಯಾಯವಾದರೂ ಧ್ವನಿ ಎತ್ತುತ್ತೇವೆ. ನನ್ನ ಕ್ಷೇ ತ್ರದಲ್ಲಿಯೇ ಮಹಿಳೆಯರಿಗೆ ಅನ್ಯಾಯವಾಗಿದೆ, ಹೀಗಿದ್ದಾಗಲೂ ನಾನು ಸುಮ್ಮನಿರಬೇ ಕಿತ್ತೆ? ಈ ಪ್ರಕರಣವನ್ನು ವೋ ಟ್ ಬ್ಯಾಂ ಕ್ಗಾಗಿ ಬಳಸಿಕೊಂಡಿದ್ದು ಕಾಂಗ್ರೆಸ್, ಆದರೆ ಬಿಜೆಪಿ ಮೇಲೆ ಆರೋಪಿಸುತ್ತಿದೆ ಆಕ್ರೋಶ ವ್ಯಕ್ತಪಡಿಸಿದರು.