ಶಿವಮೊಗ್ಗ, ಏ.23(DaijiworldNews/AA): ಬಿಜೆಪಿ ಪಕ್ಷ ಬಿಟ್ಟು ಹೋಗಿದ್ದ ಜಗದೀಶ್ ಶೆಟ್ಟರ್ ಅವರನ್ನು ಯಡಿಯೂರಪ್ಪ ವಾಪಸ್ಸು ಕರೆತಂದರು. ಆದರೆ ನಾನ್ಯಾವತ್ತೂ ಪಕ್ಷ ಬಿಟ್ಟು ಹೋಗುವ ಕೆಲಸ ಮಾಡಿಲ್ಲ ಯಾಕೆಂದರೆ ಇದು ನಾನು ಕಟ್ಟಿರುವ ಪಕ್ಷ, ಆದರೆ ಯಡಿಯೂರಪ್ಪ ಪಕ್ಷದಿಂದ ಆಚೆ ಹೋಗಿ ಕೆಜೆಪಿ ರಚಿಸಿದ್ದರು. ಹಾಗಾಗಿ ಬಿಜೆಪಿಯಲ್ಲಿ ಅವರು ಡೂಪ್ಲಿಕೇಟ್ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ.
ಶಿವಮೊಗ್ಗದಲ್ಲಿ ಮತ್ತೇ ಬಿಜೆಪಿಗೆ ಮರಳುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ನಾನು ಗೆದ್ದ ಬಳಿಕ ಅವರಪ್ಪ ಬಂದು ತನ್ನನ್ನು ಪಕ್ಷಕ್ಕೆ ಕರೆದೊಯ್ಯುತ್ತಾರೆ ಎಂದರು.
ಇನ್ನು ರಾಜ್ಯ ಬಿಜೆಪಿಯನ್ನು ಅಪ್ಪ ಮಕ್ಕಳಿಂದ ಮುಕ್ತ ಮಾಡುವುದು ತನ್ನ ಗುರಿಯಾಗಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಘವೇಂದ್ರ ಸೋತ ಬಳಿಕ ಅವರ ರಾಜಕೀಯ ಕತೆ ಮುಗಿದಂತೆ ಮತ್ತು ಚುನಾವಣೆ ಬಳಿಕ ವಿಜಯೇಂದ್ರ ರಾಜ್ಯಾಧ್ಯಕ್ಷನ ಸ್ಥಾನದಿಂದ ಕೆಳಗಿಳಿಯುತ್ತಾನೆ ಅಲ್ಲಿಗೆ ಬಿಜೆಪಿಯಲ್ಲಿ ಅಪ್ಪ ಮಕ್ಕಳ ಕತೆ ಮುಗಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.