ರಾಯಚೂರು, ಏ. 23(DaijiworldNews/AA): ಸಿದ್ದರಾಮಯ್ಯ ಸರ್ಕಾರ ತೆರಿಗೆ ಮೂಲಕ ಸಂಗ್ರಹವಾಗುವ ಹಣವನ್ನೆಲ್ಲ ಗ್ಯಾರಂಟಿ ಯೋಜನೆಗಳ ಮೇಲೆ ಸುರಿಯುತ್ತಿರುವುದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿವೆ ಎಂದು ಬಿಜೆಪಿ ಸ್ಟಾರ್ ಪ್ರಚಾರಕ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ರಾಯಚೂರಿನ ಲಿಂಗಸೂಗೂರುನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಗೂ ಮುನ್ನ ಸಿದ್ದರಾಮಯ್ಯ ‘10 ಕೆ.ಜಿ ಅಕ್ಕಿ’ ಕೊಡುತ್ತೇನೆ ಎಂದಿದ್ದರು, ಯಾರಿಗಾದರೂ ಸಿಕ್ಕಿತಾ? ಎಂದು ಪ್ರಶ್ನಿಸಿದ್ದಾರೆ.
ಅಕ್ಕಿ ಬದಲು ರಾಜ್ಯ ಸರ್ಕಾರ ಕೊಡುತ್ತಿರುವ ಹಣ ಅಬಕಾರಿ ಇಲಾಖೆ ಮೂಲಕ ವಾಪಸ್ಸು ಸರ್ಕಾರದ ಖಜಾನೆಗೆ ಹೋಗುತ್ತಿದೆ. ಯಾಕೆಂದರೆ ಆ ಹಣವನ್ನು ಮನೆಯ ಗಂಡಸರು ಮದ್ಯಸೇವನೆಗೆ ಖರ್ಚು ಮಾಡುತ್ತಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಾ ಭಾರತೀಯರಿಗೆ 32 ರೂ.ಕೆ.ಜಿ ಅಕ್ಕಿ ಸಿಗುವ ಯೋಜನೆ ಜಾರಿ ಮಾಡಿದ್ದು ಅದರಿಂದ ಕೋಟ್ಯಾಂತರ ಜನಕ್ಕೆ ಸಹಾಯವಾಗುತ್ತಿದೆ ಎಂದು ಹೇಳಿದರು.