ತಿರುವನಂತಪುರಂ, ಏ. 21(DaijiworldNews/AK):ವಯನಾಡ್ನಲ್ಲಿ ರಾಹುಲ್ ಗಾಂಧಿಗೆ ಬಿಜೆಪಿ ಬಿಗ್ ಶಾಕ್ ನೀಡಿದೆ. ವಯನಾಡ್ ಕಾಂಗ್ರೆಸ್ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿಎಂ ಸುಧಾಕರನ್ ಅವರು ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಬಿಜೆಪಿಗೆ ಸೇರ್ಪಡೆಗೊಂಡ ಬಳಿಕ ಮಾತನಾಡಿದ ಸುಧಾಕರನ್, ನನಗೆ ರಾಹುಲ್ ಗಾಂಧಿ ಲಭ್ಯವಾಗದೇ ಇರುವಾಗ ಜನಸಾಮಾನ್ಯರಿಗೆ ಅವರು ಸಿಗಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಈಗಾಗಲೇ ಅವರಿಗೆ ಐದು ವರ್ಷಗಳ ಕಾಲಾವಕಾಶ ನೀಡಲಾಯಿತು. ನಾವು ಇನ್ನೊಂದು ಅವಧಿಯನ್ನು ನೀಡಿದರೆ ಅದು ವಯನಾಡಿನ ಅಭಿವೃದ್ಧಿಯ ಭವಿಷ್ಯವನ್ನು ನಾಶಪಡಿಸುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಅವರ ಅಭಿವೃದ್ಧಿಯ ದೃಷ್ಟಿಕೋನವನ್ನು ಮೆಚ್ಚಿದ ಸುಧಾಕರನ್, ಕೇರಳದ ಬಿಜೆಪಿ ಮುಖ್ಯಸ್ಥರು ವಯನಾಡ್ ಲೋಕಸಭಾ ಕ್ಷೇತ್ರದಿಂದ ಜಯಗಳಿಸಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು.