ನವದೆಹಲಿ, ಏ. 18(DaijiworldNews/AA): ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನ ನಡೆದ ಸಂದರ್ಭ 4 ಎಲೆಕ್ಟ್ರಾನಿಕ್ ಮತಯಂತ್ರ(ಇವಿಎಂ)ಗಳು ಮತ್ತು ವಿವಿಪ್ಯಾಟ್ ಗಳ ಹೋಲಿಕೆಯಲ್ಲಿ ಬಿಜೆಪಿಗೆ ಒಂದು ಹೆಚ್ಚುವರಿ ಮತ ಬಂದಿದೆ ಎಂಬ ವರದಿಯನ್ನು ಚುನಾವಣಾ ಆಯೋಗ ನಿರಾಕರಿಸಿದೆ.
ಅಣಕು ಮತದಾನದಲ್ಲಿ ಬಿಜೆಪಿಗೆ ಬಹುಮತ ಬಂದಿದೆ ಎಂಬ ವರದಿ ಮಾಡಿರುವ ಮತ್ತು ಉಲ್ಲೇಖಿಸಿದ ಸುದ್ದಿ ಸಂಪೂರ್ಣ ಸುಳ್ಳು ಎಂದು ಚುನಾವಣಾ ಆಯೋಗದ ಅಧಿಕಾರಿ ಸುಪ್ರೀಂ ಕೋರ್ಟ್ ಗೆ ತಿಳಿಸಿದ್ದಾರೆ.
ಹೆಚ್ಚುವರಿ ಮತ ಬಿದ್ದ ಸುದ್ದಿಗಳು ಸುಳ್ಳು. ನಾವು ಜಿಲ್ಲಾಧಿಕಾರಿಯವರ ಆರೋಪವನ್ನು ಪರಿಶೀಲಿಸಿದ್ದೇವೆ ಮತ್ತು ಅವು ಸುಳ್ಳು ಎಂದು ತೋರುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ವಿವರವಾದ ವರದಿಯನ್ನು ಸಲ್ಲಿಸುತ್ತೇವೆ ಎಂದು ಆಯೋಗ ತಿಳಿಸಿದೆ.
ಅಣಕು ಮತದಾನದ ವೇಳೆ ನಿಗದಿತ ಮತಕ್ಕಿಂತ ಬಿಜೆಪಿಗೆ ಬಹುಮತ ಬಂದ ಹಿನ್ನೆಲೆ ಇವಿಎಂಗಳನ್ನು ಪರಿಶೀಲನೆ ಮಾಡುವಂತೆ ಸುಪ್ರೀಂ ಕೋರ್ಟ್ ಭಾರತೀಯ ಚುನಾವಣಾ ಆಯೋಗಕ್ಕೆ ಆದೇಶಿಸಿತ್ತು.