ಗುವಾಹಟಿ, ಏ.17(DaijiworldNews/AK): ಅಯೋಧ್ಯೆ ರಾಮ ಮಂದಿರದಲ್ಲಿ ಇಂದು ರಾಮನವಮಿ ಹಬ್ಬವನ್ನು ವಿಶೇಷ ಹಾಗೂ ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸೂರ್ಯ ರಶ್ಮಿಯು ರಾಮ ಲಲ್ಲಾನ ವಿಗ್ರಹದ ಹಣೆಯನ್ನು ಸ್ಪರ್ಶಿಸುವ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರು ವೀಕ್ಷಣೆ ಮಾಡಿದ್ದಾರೆ.
ಬಳಿಕ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಹಂಚಿಕೊಂಡು, ನಲ್ಬರಿ ರ್ಯಾಲಿಯ ನಂತರ ನಾನು ಸೂರ್ಯ ತಿಲಕವನ್ನು ವೀಕ್ಷಿಸಿದೆ. ಕೋಟಿಗಟ್ಟಲೆ ಭಾರತೀಯರಂತೆ ನನಗೂ ಇದು ಅತ್ಯಂತ ಭಾವನಾತ್ಮಕ ಹಾಗೂ ಐತಿಹಾಸಿಕ ಕ್ಷಣವಾಗಿದೆ.ಈ ಸೂರ್ಯ ತಿಲಕ ನಮ್ಮ ಜೀವನಕ್ಕೆ ಶಕ್ತಿಯನ್ನು ತರಲಿ ಮತ್ತು ನಮ್ಮ ರಾಷ್ಟ್ರವು ವೈಭವದ ಹೊಸ ಎತ್ತರಗಳನ್ನು ಏರಲು ಪ್ರೇರೇಪಿಸಲಿ ಎಂದು ಶುಭಹಾರೈಸಿದ್ದಾರೆ.
ಪ್ರಧಾನಿಯವರು ಇಂದು ಅಸ್ಸಾಂನ ನಲ್ಬರಿ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು. ಈ ನಡುವೆಯೇ ಸೂರ್ಯ ತಿಲಕ ಕ್ಷಣವನ್ನು ನೋಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಸೂರ್ಯ ತಿಲಕ ವೀಕ್ಷಿಸುತ್ತಿರುವ ವೀಡಿಯೋ , ಫೋಟೋಗಳು ವೈರಲ್ ಆಗುತ್ತಿವೆ.