ನವದೆಹಲಿ, ಏ. 16(DaijiworldNews/AK): ಭಾರತೀಯ ನಾಗರಿಕ ಸೇವೆಗಳ ಪರೀಕ್ಷೆ ಪಾಸ್ ಮಾಡುವುದು ಸುಲಭದ ವಿಚಾರವಲ್ಲ. ಸ್ಕೂಲ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಅಂಜು ಶರ್ಮಾ ಯುಪಿಎಸ್ಸಿ ಮೊದಲ ಪ್ರಯತ್ನದಲ್ಲಿ ಪಾಸ್ ಆಗಿ ಯಶಸ್ಸು ಕಂಡವರು. . ಅವರ ಮೊದಲ ಸೋಲೆ, ಯುಪಿಎಸ್ಸಿ ಪರೀಕ್ಷೆಯಲ್ಲಿ ಮೊದಲ ಬಾರಿಗೆ ಯಶಸ್ಸು ಕಾಣಲು ದಾರಿ ಮಾಡಿಕೊಟ್ಟಿತ್ತು. ಇಂದಿನ ಯುಪಿಎಸ್ಸಿ ಸ್ಟೋರಿಯಲ್ಲಿ ಐಎಎಸ್ ಅಧಿಕಾರಿಯಾದ ಅಂಜು ಶರ್ಮಾ ಯಶೋಗಾಥೆ.
ಐಎಎಸ್ ಅಧಿಕಾರಿಯಾದ ಅಂಜು ಶರ್ಮಾ ತಮ್ಮ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅರ್ಥಶಾಸ್ತ್ರ ವಿಷಯದಲ್ಲಿ ಫೇಲ್ ಆಗಿದ್ರು. ಆದ್ರೆ ಯುಪಿಎಸ್ಸಿ ಸಿಎಸ್ಇ ಪರೀಕ್ಷೆಯನ್ನು ತಮ್ಮ 22ನೇ ವಯಸ್ಸಿಗೆ ಪರೀಕ್ಷೆ ತೆಗೆದುಕೊಂಡ ಮೊದಲ ವರ್ಷವೇ ಪಾಸ್ ಮಾಡಿದ್ದಾರೆ. ಇವರು ತಮ್ಮ ಪಿಯು ಪರೀಕ್ಷೆಯ ವಿಫಲವಾಗಿರುವುದನ್ನೆ ಸಕ್ಸಸ್ ಆಗಿ ಬದಲಾಯಿಸಿ ಕೊಂಡರು. ಸಕ್ಸಸ್ ಅನ್ನೋದು ಡೆಸ್ಟಿನೇಷನ್ ಅಲ್ಲ. ಅದೊಂದು ಜರ್ನಿ ಎಂದು ತೋರಿಸಿಕೊಟ್ಟರು.
ಒಮ್ಮೆ ಮಾತ್ರವಲ್ಲದೇ ಎರಡು ಬಾರಿ ಸೋಲುಂಡ ಅವರಿಗೆ ಅವರ ಅಮ್ಮ ಸದಾ ಮೋಟಿವೇಟ್ ಮಾಡುತ್ತಿದ್ದರಂತೆ. ಅಮ್ಮನ ಪ್ರೇರಣೆ ಇಂದಲೇ ಬೆಳೆದ ಅಂಜು ಶರ್ಮಾ ರವರು ತಮ್ಮ ಕಾಲೇಜು ಶಿಕ್ಷಣದಲ್ಲಿ ಗೋಲ್ಡ್ ಮೆಡಲಿಸ್ಟ್ ಆಗಿ ಹೊರಹೊಮ್ಮಿದರು. ತಮ್ಮ ಬಿಎಸ್ಸಿ ಮತ್ತು ಎಂಬಿಎ ಪದವಿಗಳನ್ನು ಜೈಪುರ್ ನಲ್ಲಿ ಪಡೆದರು.
ಕಾಲೇಜು ಶಿಕ್ಷಣದಲ್ಲಿ ಅಡ್ವಾನ್ಸ್ ಆಗಿ ಓದಲು ಆರಂಭಿಸಿದ ಅಂಜು ಶರ್ಮಾ ರವರ ಅಧ್ಯಯನ ಟೆಕ್ನಿಕ್ ಅವರು ಯುಪಿಎಸ್ಸಿ ಮೊದಲ ಅಂಟೆಂಪ್ಟ್ನಲ್ಲಿ ಕ್ಲಿಯರ್ ಮಾಡಲು ಸಹಾಯವಾಯಿತು.
ಅಂಜು ಶರ್ಮಾ ತಮ್ಮ ಕರ್ತವ್ಯವನ್ನು ಅಸಿಸ್ಟಂಟ್ ಕಲೆಕ್ಟರ್ ಆಗಿ 1991 ರಾಜ್ಕೋಟ್ನಲ್ಲಿ ಆರಂಭಿಸಿದರು. ಪ್ರಸ್ತುತ ಗಾಂಧಿನಗರದಲ್ಲಿ ಸರ್ಕಾರ ಶಿಕ್ಷಣ ಇಲಾಖೆ (ಉನ್ನತ ಮತ್ತು ತಾಂತ್ರಿಕ ಶಿಕ್ಷಣ) ಮುಖ್ಯ ಕಾರ್ಯದರ್ಶಿ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಅಂಜು ಶರ್ಮಾ ತಮ್ಮ ಮೂರು ದಶಕಗಳ ಸೇವೆಯಲ್ಲಿ ಡಿಡಿಒ ಬರೋಡಾ, ಡಿಸ್ಟ್ರಿಕ್ಟ್ ಕಲೆಕ್ಟರ್ ಆಗಿ ಗಾಂಧಿನಗರದಲ್ಲಿ ಮತ್ತು ಮಿನಿಸ್ಟ್ರಿ ಆಫ್ ಇಂಡಸ್ಟ್ರಿ ಮತ್ತು ಕಾಮರ್ಸ್, ಭಾರತ ಸರ್ಕಾರ, ಎನ್ಆರ್ಹೆಚ್ಎಂ ನಲ್ಲಿ ಸೇವೆ ಸಲ್ಲಿಸಿದ್ದಾರೆ.