ಇಂಫಾಲ, ಏ. 15(DaijiworldNews/AK): ಮಣಿಪುರವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದ್ದು, ರಾಜ್ಯವನ್ನು ಒಡೆಯುವ ಮತ್ತು ಒಗ್ಗೂಡಿಸುವ ಶಕ್ತಿ ಈ ಚುನಾವಣೆಗಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಹೇಳಿದ್ದಾರೆ.
ಇಂಫಾಲದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು, ಮಣಿಪುರಕ್ಕೆ ಒಳನುಸುಳುವಿಕೆಯ ಪ್ರಯತ್ನಗಳು ನಡೆಯುತ್ತಿದ್ದು, ರಾಜ್ಯವನ್ನು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಎಷ್ಟೇ ಪ್ರಯತ್ನಿಸಿದರೂ ನಾವು ಮಣಿಪುರವನ್ನು ಒಡೆಯಲು ಬಿಡುವುದಿಲ್ಲ ಹೇಳುವ ಮೂಲಕ ಮಣಿಪುರದಲ್ಲಿ ಶಾಂತಿ ಸ್ಥಾಪನೆಗೆ ಪ್ರತಿಜ್ಞೆ ಮಾಡಿದ್ದಾರೆ.
ಮಣಿಪುರದಲ್ಲಿ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಮತ್ತು ರಾಜ್ಯವನ್ನು ಒಡೆಯದೆ ಶಾಂತಿ ಸ್ಥಾಪನೆ ಮಾಡುವುದು ನರೇಂದ್ರ ಮೋದಿ ಸರ್ಕಾರದ ಆದ್ಯತೆಯಾಗಿದೆ. ಬಿಜೆಪಿ ಮಣಿಪುರವನ್ನು ಬಲಪಡಿಸಿದೆ. ಮಣಿಪುರದ ಭವಿಷ್ಯ ಬದಲಾದಾಗ ದೇಶದ ಭವಿಷ್ಯ ಬದಲಾಗುತ್ತದೆ ಎಂದು ಅವರು ಹೇಳಿದ್ದಾರೆ.