ಲಕ್ನೋ, ಏ. 15(DaijiworldNews/AA): ಒಂದು ವೇಳೆ ನಮ್ಮ್ ಪಕ್ಷ ಅಧಿಕಾರಕ್ಕೆ ಏರಿದರೆ ಪಶ್ಚಿಮ ಉತ್ತರ ಪ್ರದೇಶವನ್ನು ಪ್ರತ್ಯೇಕ ರಾಜ್ಯವನ್ನಾಗಿ ಘೋಷಣೆ ಮಾಡಲಾಗುತ್ತದೆ ಎಂದು ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಪಶ್ಚಿಮ ಉತ್ತರ ಪ್ರದೇಶದಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲಾಗುತ್ತದೆ. ನಮ್ಮ ಪಕ್ಷ ಕೆಲಸ ಮಾಡುವುದರಲ್ಲಿ ನಂಬಿಕೆ ಇಟ್ಟಿದೆ ಹಾಗಾಗಿ ಪ್ರಣಾಳಿಕೆ ಬಿಡುಗಡೆ ಮಾಡುವುದಿಲ್ಲ. ಉತ್ತರ ಪ್ರದೇಶದಲ್ಲಿ ನನ್ನ ನೇತೃತ್ವದಲ್ಲಿ 4 ಬಾರಿ ಸರ್ಕಾರ ರಚನೆಯಾಗಿದ್ದು, ನಮ್ಮ ಸರ್ಕಾರಾವಧಿಯಲ್ಲಿ ಯಾವುದೇ ರೀತಿಯ ಕೋಮುಗಲಭೆಗಳು ನಡೆದಿಲ್ಲ. ಆದರೆ ಎಸ್ಪಿ ಸರ್ಕಾರದಲ್ಲಿ, ಜಾಟ್ ಮತ್ತು ಮುಸ್ಲಿಂ ಸಮುದಾಯಗಳು ಪರಸ್ಪರ ಹೊಡೆದಾಡುವಂತೆ ಮಾಡಲಾಗಿದೆ ಎಂದರು.
ಇಲ್ಲಿ ತೀರಾ ಹಿಂದುಳಿದ ಸಮುದಾಯದ ಒಬ್ಬರಿಗೆ ಟಿಕೆಟ್ ನೀಡಿ ಈ ಸ್ಥಳದಲ್ಲಿ ಮುಸ್ಲಿಂ ಸಮುದಾಯ ಮತ್ತು ಜಾಟ್ ಸಮುದಾಯದ ನಡುವೆ ಭಾಂದವ್ಯ ಮೂಡಿಸಿದ್ದೇವೆ. ನಾನು ಮುಜಾಫರ್ ನಗರದಿಂದ ಮುಸ್ಲಿಂ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಯಸಿದ್ದೆ ಆದರೆ ಮುಸ್ಲಿಂ ಸಮುದಾಯದಿಂದ ಯಾರೂ ಸ್ಪರ್ಧಿಸಲು ಸಿದ್ಧರಿರಲಿಲ್ಲ ಎಂದು ಅವರು ಹೇಳಿದ್ದಾರೆ.