ಭೋಪಾಲ್, ಏ. 15(DaijiworldNews/AA): ಯುಪಿಎಸ್ಸಿ ಪರೀಕ್ಷೆಯು ಭಾರತದಲ್ಲಿನ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಹಲವಾರು ವಿದ್ಯಾರ್ಥಿಗಳು ಈ ಪರೀಕ್ಷೆಯನ್ನು ಬರೆಯುತ್ತಾರೆ. ಆದರೆ ಕೆಲವರು ಮಾತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಹೀಗೆ ತಮ್ಮ ಮೊದಲ ಪ್ರಯತ್ನದಲ್ಲೇ ಯುಪಿಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಐಎಎಸ್ ಅಧಿಕಾರಿ ಸೃಷ್ಟಿ ದೇಶಮುಖ್ ಗೌಡ ಅವರ ಯಶೋಗಾಥೆ ಇದು.
ಸೃಷ್ಟಿ ದೇಶಮುಖ್ ಅವರು ಮೂಲತಃ ಮಧ್ಯಪ್ರದೇಶ ಭೋಪಾಲ್ನಲ್ಲಿನ ಕಸ್ತೂರ್ಬಾ ನಗರದವರು. ಸೃಷ್ಟಿ ಅವರ ತಂದೆ ಜಯಂತ್ ದೇಶಮುಖ್ ಇಂಜಿನಿಯರ್, ತಾಯಿ ಸುನೀತಾ ದೇಶಮುಖ ಶಿಕ್ಷಕಿ. ಸೃಷ್ಟಿ ಅವರು ಭೋಪಾಲ್ ಬಿಹೆಚ್ ಇಎಲ್ ನ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿನಿ ಆಗಿದ್ದ ಅವರು ಬೋರ್ಡ್ ಪರೀಕ್ಷೆಯಲ್ಲಿ 93.4% ಪಡೆಯುತ್ತಾರೆ.
ಬಳಿಕ ಸೃಷ್ಟಿ ದೇಶಮುಖ್ ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾಲೇಜಿಗೆ ಹಾಜರಾಗಲು ಬಯಸಿದ್ದರು. ಆದರೆ ಸೃಷ್ಟಿ ಅವರಿಗೆ ಜೆಇಇ ತೇರ್ಗಡೆಯಾಗಲು ಸಾಧ್ಯವಾಗಲಿಲ್ಲ. ಆದ್ದರಿಂದ ಭೋಪಾಲ್ ನ ಲಕ್ಷ್ಮೀ ನಾರಾಯಣ್ ಕಾಲೇಜ್ ಆಫ್ ಟೆಕ್ನಾಲಜಿಗೆ ಸೇರುತ್ತಾರೆ. ಅಲ್ಲಿ ಅವಳು ಕೆಮಿಕಲ್ ಇಂಜಿನಿಯರಿಂಗ್ನಲ್ಲಿ ತನ್ನ ಬಿ.ಟೆಕ್ ಅನ್ನು ಮುಗಿಸುತ್ತಾರೆ.
ಸೃಷ್ಟಿ ಅವರಿಗೆ ಯುಪಿಎಸ್ ಸಿ ಪರೀಕ್ಷೆ ಬರೆಯುವ ಹಂಬಲವಿತ್ತು. ಹೀಗಾಗಿ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿರುತ್ತಾರೆ. 2018 ರಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದ ಅವರು 5ನೇ ರ್ಯಾಂಕ್ ಪಡೆದು ಉತ್ತಿರ್ಣರಾಗುತ್ತಾರೆ. ಈ ಮೂಲಕ 23ನೇ ವಯಸ್ಸಿಗೆ ಐಎಎಸ್ ಆಧಿಕಾರಿಯಾಗುತ್ತಾರೆ. ಇನ್ನು ಸೃಷ್ಟಿ ಅವರು ಐಎಎಸ್ ಅಧಿಕಾರಿಯಾಗಿರುವ ವೈದ್ಯ ನಾಗಾರ್ಜುನ್ ಬಿ.ಗೌಡ ಅವರನ್ನು ವಿವಾಹವಾಗಿದ್ದಾರೆ.