ಬೆಂಗಳೂರು,ಏ. 14(DaijiworldNews/AK): ಸಂವಿಧಾನದ ಶಿಲ್ಪಿ ಡಾ ಬಿ.ಆರ್. ಅಂ ಬೇ ಡ್ಕರ್ ಅವರ 133ನೇ ಜನ್ಮದಿನೋ ತ್ಸವದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ, ವಿರೋ ಧ ಪಕ್ಷದ ನಾಯಕ ಆರ್. ಅಶೋಕ, ವಿಜಯೇಂದ್ರ ಸೇರಿದಂತೆ ಗಣ್ಯರು ಗೌರವ
ನಮನ ಸಲ್ಲಿಸಿದ್ದಾರೆ.
ಹಳ್ಳಿಯಲ್ಲಿ ಕುರಿಕಾಯುತ್ತಿದ್ದ ನಾನು ಇಂ ದು ರಾಜ್ಯದ ಮುಖ್ಯಮಂ ತ್ರಿಯಾಗಿರುವುದು ಮತ್ತು ರೈಲ್ವೆ ಸ್ಟೇ ಷನ್ ನಲ್ಲಿ ಚಹಾ ಮಾರುತ್ತಿದ್ದ ನರೇಂದ್ರ ದಾಮೋದರದಾಸ ಮೋ ದಿ ಅವರು ದೇ ಶದ ಪ್ರಧಾನಿಯಾಗಿರುವುದು ಬಾಬಾ ಸಾಹೇ ಬ್ ಅಂ ಬೇ ಡ್ಕರ್ ಮತ್ತು ಅವರು ರಚಿಸಿ ಕೊಟ್ಟಿರುವ ಸಂವಿಧಾನದ ಕಾರಣಕ್ಕೆ. ಸಂ ವಿಧಾನವನ್ನು ಬದಲಾಯಿಸಲು ಪಣತೊಟ್ಟವರ ವಿರುದ್ಧ ಹೋರಾಟಕ್ಕೆ ನಮಗೆ ಬಾಬಾಸಾಹೇಬರ ಚಿಂತನೆಗಳೇ ಅಸ್ತ್ರ ಗಳು ಎಂದು ಸಿಎಂ ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಸಮ ಸಮಾಜದ ಕನಸು ಕಂಡು, ಅದರ ಸಾಕಾರಕ್ಕಾಗಿ ಇಡೀ ಬದುಕನ್ನೇ ಮೀಸಲಿಟ್ಟ ಮಹಾನ್ಮಾನವತಾವಾದಿ, ದೀ ನ ದಲಿತ ದುರ್ಬಲರ ದನಿಯಾಗಿ ಶಿಕ್ಷಣವೇ ಸಮಾನತೆಯ ಮಾರ್ಗ ಎಂ ದು ಪ್ರತಿಪಾದಿಸಿದ ಸಂವಿಧಾನ ಶಿಲ್ಪಿ ಅಂಬೇ ಡ್ಕರ್ ಅವರ ಜಯಂತಿ ದಿನದಂದು ಅವರಿಗೆ ನನ್ನ ಶತ ನಮನಗಳು ಎಂದು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಅಸಮಾನತೆ, ಜಾತಿ ವ್ಯವಸ್ಥೆ, ಅಸ್ಪ್ರ ಶ್ಯತೆ ವಿರುದ್ಧ ಹೋ ರಾಡಿದ ಮಹಾಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ ಆರ್ ಅಂಬೇ ಡ್ಕರ್ ಅವರ ಜನ್ಮ ಜಯಂತಿಯಂದು ನನ್ನ ಗೌರವಪೂರ್ಣ ನಮನಗಳು ಎಂದು ವಿರೋ ಧ ಪಕ್ಷದ ನಾಯಕ ಆರ್. ಅಶೋಕ ಹೇ ಳಿದ್ದಾರೆ.
ಅಂ ಬೇ ಡ್ಕರ್ ಅವರ ಜಯಂ ತಿಯ ಅಂ ಗವಾಗಿ ಪಕ್ಷದ ರಾಜ್ಯ ಕಾರ್ಯಾ ಲಯ ಜಗನ್ನಾಥ ಭವನದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು ಎಂ ದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ .ವಿಜಯೇಂದ್ರ ಎಕ್ಸ್ನಲ್ಲಿ ಪೋ ಸ್ಟ್ ಮಾಡಿದ್ದಾರೆ.