ನವದೆಹಲಿ, ಏ. 13(DaijiworldNews/AA): ಹೆಲ್ತ್ ಡ್ರಿಂಕ್ಸ್ ಪಟ್ಟಿಯಿಂದ ಬೋನ್ ರ್ವಿಟಾವನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಇ-ಕಾಮರ್ಸ್ ಕಂಪನಿಗಳಿಗೆ ಆದೇಶ ನೀಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ್ ಕಾಯಿದೆ ಅಡಿಯಲ್ಲಿ ಬೋನ್ ರ್ವಿಟಾ ಮತ್ತು ಇತರ ರೀತಿಯ ಪಾನೀಯಗಳನ್ನು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಿಂದ ತೆಗೆದುಹಾಕಿ. ಇದು ಯಾವುದೇ ಆರೋಗ್ಯ ಪಾನೀಯು ವರ್ಗಕ್ಕೆ ಸೇರುವುದಿಲ್ಲ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಏಪ್ರಿಲ್ 10ರಂದು ಈ ಆದೇಶ ಹೊರಡಿಸಲಾಗಿತ್ತು. ನ್ಯಾಷನಲ್ ಕಮಿಷನ್ ಫಾರ್ ಪ್ರೊಟೆಕ್ಷನ್ ಆಫ್ ಚೈಲ್ಡ್ ರೈಟ್ಸ್, ಇದು ಸಿಆರ್ ಪಿಸಿ ಕಾಯಿದೆ 2005 ರ ಸೆಕ್ಷನ್ 14 ರ ಅಡಿಯಲ್ಲಿ ಈ ಬಗ್ಗೆ ವಿಚಾರಣೆಯನ್ನು ನಡೆಸಿದೆ. ಹಾಗೂ 2005ರ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಕಾಯಿದೆಯ ಸೆಕ್ಷನ್ (3) ಅಡಿಯಲ್ಲಿ ರಚಿತವಾದ ಶಾಸನಬದ್ಧ ಸಂಸ್ಥೆಗಳು ಎಫ್ಎಸ್ಎಸ್ ಕಾಯಿದೆ 2006ರ ಅಡಿಯಲ್ಲಿ ಆರೋಗ್ಯ ಪಾನೀಯಗಳ ಬಗ್ಗೆ ಎಫ್ಎಸ್ಎಸ್ಎಐ ಮತ್ತು ಮೊಂಡೆಲೆಜ್ ಇಂಡಿಯಾ ಫುಡ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸುವಂತೆ ಏಪ್ರಿಲ್ 10ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.
ಒಂದು ವರ್ಷದ ಹಿಂದೆ ಬೋನ್ ರ್ವಿಟಾದಲ್ಲಿ ಸಕ್ಕರೆಯ ಮಟ್ಟದ ಅಂಶ ಹೆಚ್ಚಿದೆ ಎಂದು ಆರೋಪಿಸಲಾಗಿತ್ತು. ಈ ಆರೋಪದ ಬಳಿಕ ಪಾನೀಯದಲ್ಲಿ ಸಮಸ್ಯೆ ಇರುವುದಾಗಿ ಕಂಡುಬಂದಿದೆ. ಬಳಿಕ ಈ ಬಗ್ಗೆ ಜಾಹೀರಾತು ನೀಡದಂತೆ ತಡೆ ನೀಡಲಾಗಿತ್ತು. ಇದೀಗ ಪಾನೀಯದಲ್ಲಿ ಹೆಚ್ಚಿನ ಸಕ್ಕರೆ ಅಂಶ ಇದೆ ಎಂದ ನಂತರ ಆಯೋಗ ಈ ಆದೇಶ ಹೊರಡಿಸಿದೆ.