ರಾಮನಗರ, ಏ. 12(DaijiworldNews/AK): ಹಿಂದಿನಿಂದಲೂ ದೇವೇಗೌಡರ ಕುಟುಂಬ ಡಿ.ಕೆ.ಶಿವಕುಮಾರ್ ಮೇಲೆ ಹಗೆತನ ಸಾಧಿಸುತ್ತಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ಒಕ್ಕಲಿಗ ನಾಯಕರ ಜೊತೆ ಚುಂಚನಗಿರಿ ಶ್ರೀಗಳನ್ನು ಕುಮಾರಸ್ವಾಮಿ ಭೇಟಿ ಮಾಡಿದ ವಿಚಾರ ಕುರಿತು ಕಾಂಗ್ರೆಸ್ ಅಭ್ಯರ್ಥಿ ಡಿ.ಕೆಎ.ಸುರೇಶ್ ತಿರುಗೇಟು ನೀಡಿದ್ದಾರೆ. ಹಿಂದೆ ಸರ್ಕಾರ ತೆಗೆಯುವ ಸಂದರ್ಭದಲ್ಲಿ ಯಾರು ನಾಯಕತ್ವ ವಹಸಿಕೊಂಡಿದ್ರು. ಅವ್ರ ಜೊತೆ ಸ್ವಾಮೀಜಿಗಳನ್ನ ಭೇಟಿ ಮಾಡಿರುವುದನ್ನು ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿದ್ದಾರೆ. ಒಕ್ಕಲಿಗ ಸಮುದಾಯ ಸ್ವಾಭಿಮಾನಿಗಳು. ಯಾರನ್ನ ಯಾವ ಸಂದರ್ಭದಲ್ಲಿ ಏನು ಮಾಡಬೇಕು ಎಂಬುದು ಸಮುದಾಯಕ್ಕೆ ಗೊತ್ತಿದೆ ಎಂದು ಜೆಡಿಎಸ್ಗೆ ತಿರುಗೇಟು ನೀಡಿದರು.
ಡಿ.ಕೆ.ಶಿವಕುಮಾರ್ ಒಂದು ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಎಲ್ಲಾ ಸಮುದಾಯವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಇದೆ. ಸಮುದಾಯದ ಬೆಂಬಲ ಕೂಡ ಇದೆ. ಕುಮಾರಸ್ವಾಮಿ ರಾಜಕೀಯವಾಗಿ ಏನೇನೊ ಹೇಳ್ತಾ ಇರ್ತಾರೆ. ಅವರು ಹೇಳೋದು ಎಲ್ಲಾ ಸತ್ಯಾ ಇದ್ಯಾ? ನಮಗೆ ಆ ಭಾವನೆ ಇಲ್ಲ ಎಂದು ಹೇಳಿದರು.
ಅವರು ಬೇರೆ ಬೇರೆ ವ್ಯಾಖ್ಯಾನ ಮಾಡುತ್ತಾದ್ದಾರೆ ಎಂದರೆ ಅದೆಲ್ಲದಕ್ಕೂ ನಾನು ಉತ್ತರ ಕೊಡಲ್ಲ. ಡಿಕೆಶಿ ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂಬ ಹೆಚ್ಡಿಕೆ ಹೇಳಿಕೆ ಬಗ್ಗೆ ಮಾತನಾಡಿ, ಇದು ಚುನಾವಣೆ ಸಂದರ್ಭದಲ್ಲಿ ಈ ಎಲ್ಲಾ ಹೇಳಿಕೆಗಳಿಗೂ. ಆಮೇಲೆ ಸಭೆ ಕರೆಯಲಿ ಉತ್ತರ ಕೊಡುತ್ತೇನೆ ಎಂದರು.