ನವದೆಹಲಿ, ಏ. 12(DaijiworldNews/AK): ಶೀಘ್ರದಲ್ಲಿ ಜಮ್ಮು-ಕಾಶ್ಮೀ ರಕ್ಕೆ ರಾಜ್ಯ ಸ್ಥಾನಮಾನ ನೀಡಲಾಗುವುದು. ನಂತರ ವಿಧಾನಸಭೆ ಚುನಾವಣೆ ನಡೆಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸಾರ್ವ ಜನಿಕ ಸಭೆಯನ್ನು ಉದ್ದೇ ಶಿಸಿ ಮಾತನಾಡಿದ ಅವರು, ಜಮ್ಮು- ಕಾಶ್ಮೀ ರದಲ್ಲಿ ವಿಧಾನಸಭೆ ಚುನಾವಣೆ ನಡೆಯುವ ಸಮಯ ಹೆಚ್ಚು ದೂರವಿಲ್ಲ.ಈ ಮೂಲಕ ನಿಮ್ಮ ಕನಸುಗಳನ್ನು ನಿಮ್ಮ ಶಾಸಕರು ಮತ್ತು ಸಚಿವರ ಜೊತೆ ಹಂಚಿಕೊಳ್ಳಬಹುದಾಗಿದೆ ಎಂದರು.
ಯಾವುದೇ ಭಯೋತ್ಪಾದನೆ, ಬಂದ್, ಕಲ್ಲು ತೂರಾಟದಂತಹ ಭಯವಿಲ್ಲದೇ ಜಮ್ಮು-ಕಾಶ್ಮೀ ರದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ನನ್ನ ಮೇಲೆ ವಿಶ್ವಾಸವಿಡಿ ಎಂದರು. , ಕಳೆದ 60 ವರ್ಷಗಳಿಂದ ಬಗೆಹರಿಯದ ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುತ್ತೇನೆ. ಕಳೆದ 10 ವರ್ಷಗಳಲ್ಲಿ ಜಮ್ಮು -ಕಾಶ್ಮೀ ರದಲ್ಲಿ ಸಂಪೂರ್ಣವಾಗಿ ಬದಲಾವಣೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
ಈ ವೇಳೆ ಉಧಾಂಪುರ್ ಮತ್ತು ಜಮ್ಮು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಪ್ರಧಾನಿ ಮೋದಿ ಮತದಾರರಲ್ಲಿ ಮನವಿ ಮಾಡಿಕೊಂಡರು. ಏಪ್ರಿಲ್ 19ರಂದು ಉಧಾಂಪುರ್ ನಲ್ಲಿ ಚುನಾವಣೆ ನಡೆಯಲಿದೆ.