ನವದೆಹಲಿ,ಏ. 12(DaijiworldNews/AK): ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ ಮೇಲೆ ಪ್ರಧಾನಿ ನರೇಂದ್ರ ಮೋದಿ ದೊಡ್ಡ ಪ್ರಭಾವ ಬೀರಲಾರರು .2023ರ ವಿಧಾನಸಭೆ ಚುನಾವಣೆ ವೇಳೆ ಮೋ ದಿ 15 ಬಾರಿ ಕರ್ನಾ ಟಕಕ್ಕೆ ಭೇಟಿ ಕೊಟ್ಟರು. 224 ಕ್ಷೇ ತ್ರಗಳ ಪೈಕಿ ನಾವು 135 ಕ್ಷೇ ತ್ರಗಳಲ್ಲಿ ಗೆಲುವು ಸಾಧಿಸಿ ಸರ್ಕಾರ ರಚಿಸಿದೆವು
ಎಂದು ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ದೇ ಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ದೊಡ್ಡ ಪ್ರಭಾವ ಹೊಂದಿಲ್ಲ. ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಕ್ಷೇ ತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುತ್ತದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷ ಪಕ್ಕಾ ಹೋವರ್ಕ್ ಮಾಡಿದೆ. ಪ್ರತಿ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಗೆಲುವಿನ ಸಾಮರ್ಥ್ಯವನ್ನು 10 ಪಾಯಿಂಟ್ಸ್ ಮೂಲಕ ಅಳೆಯುವುದಾದರೆ, ನಮ್ಮ ಪಕ್ಷದ ಅಭ್ಯರ್ಥಿಗಳು 9 ಪಾಯಿಂಟ್ಸ್ ಪಡೆದರೆ, ಬಿಜೆಪಿ ಅಭ್ಯರ್ಥಿ ಗಳು 2 ಅಥವಾ 3ಕ್ಕೆ ನಿಲ್ಲುತ್ತಾರೆ ಎಂದರು.
ಇದೇ ವೇಳೆ, ಒಂದು ಕ್ಷೇತ್ರದಲ್ಲಿರುವ ನಮ್ಮ ಸಂಸದರು ಜನರ ಸಮಸ್ಯೆಗಳನ್ನು ಆಲಿಸಿ ತಳಮಟ್ಟದಿಂದ ಕೆಲಸಮಾಡಿದ್ದಾರೆ ಎಂದೂ ಸಂಸದ ಡಿ.ಕೆ. ಸುರೇಶ್ ಕೆಲಸವನ್ನು ಪರಮೇಶ್ವರ್ ಶ್ಲಾಘಿಸಿದ್ದಾರೆ.