ನವದೆಹಲಿ, ಏ 11 (DaijiworldNews/AA): ಭಾರತಕ್ಕೆ ನೂತನ ಬ್ರಿಟಿಷ್ ರಾಯಭಾರಿಯಾಗಿ ಲಿಂಡಿ ಕ್ಯಾಮರೂನ್ ಅವರನ್ನು ಬ್ರಿಟನ್ ಸರ್ಕಾರ ಗುರುವಾರ ನೇಮಿಸಿದೆ.
ಈ ಹಿಂದೆ ಭಾರತದಲ್ಲಿನ ಬ್ರಿಟಿಷ್ ರಾಯಭಾರಿಯಾಗಿ ಅಲೆಕ್ಸ್ ಎಲ್ಲಿಸ್ ಅವರು ಇದ್ದರು. ಇದೀಗ ಕ್ಯಾಮರೂನ್ ಅವರು ಅಲೆಕ್ಸ್ ಎಲ್ಲಿಸ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಲಿಂಡಿ ಕ್ಯಾಮರೂನ್ ಅವರನ್ನು ರಿಪಬ್ಲಿಕ್ ಆಫ್ ಇಂಡಿಯಾಕ್ಕೆ ಬ್ರಿಟಿಷ್ ಹೈಕಮಿಷನರ್ ಆಗಿ ನೇಮಕ ಮಾಡಲಾಗಿದೆ. ಅಲೆಕ್ಸ್ ಎಲ್ಲಿಸ್ ಅವರು ಮತ್ತೊಂದು ರಾಜತಾಂತ್ರಿಕ ಸೇವಾ ನೇಮಕಾತಿಗೆ ವರ್ಗಾವಣೆಯಾಗಲಿದ್ದಾರೆ ಎಂದು ಬ್ರಿಟಿಷ್ ರೀಡೌಟ್ ಮಾಹಿತಿ ನೀಡಿದೆ.
ಕ್ಯಾಮೆರೂನ್ ಅವರು ಈ ತಿಂಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ನವದೆಹಲಿಯಲ್ಲಿ ಯುನೈಟೆಡ್ ಕಿಂಗ್ಡಂ ಹೈಕಮಿಷನ್ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇನ್ನು ಕ್ಯಾಮೆರಾನ್ ಅವರು 2020 ರಿಂದ ಯುಕೆ ರಾಷ್ಟ್ರೀಯ ಸೈಬರ್ ಭದ್ರತಾ ಕೇಂದ್ರದ ಮುಖ್ಯ ಕಾರ್ಯನಿರ್ವಾಹಕರಾಗಿ ಕಾರ್ಯ ನಿರ್ವಹಿಸಿದ್ದು, ಯುಕೆನ ಉತ್ತರ ಐರ್ಲೆಂಡ್ ಕಚೇರಿ ಮಹಾನಿರ್ದೇಶಕರಾಗಿಯೂ ಸೇವೆ ಸಲ್ಲಿಸಿರುತ್ತಾರೆ.