ಬೆಂಗಳೂರು, ಏ 09 (DaijiworldNews/AK): ಮೈತ್ರಿ ಒಕ್ಕಲಿಗ ನಾಯಕರ ಶಕ್ತಿಪ್ರದರ್ಶನಕ್ಕೂ ಮುನ್ನ ಇಂದು ದೋಸ್ತಿ ನಾಯಕರೆಲ್ಲ ಆದಿಚುಂಚನಗಿರಿ ಮಠಕ್ಕೆ ತೆರಳಿ ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದರು.
ಹೆಚ್.ಡಿ ಕುಮಾರಸ್ವಾಮಿ, ಆರ್.ಅಶೋಕ್, ಸಿ.ಟಿ ರವಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ, ಅಶ್ವಥ್ ನಾರಾಯಣ್, ಪಿಸಿ ಮೋಹನ್, ಯದುವೀರ್ ಒಡೆಯರ್, ನಿಖಿಲ್, ಬೆಂಗಳೂರು ಗ್ರಾ, ಅಭ್ಯರ್ಥಿ ಸಿಎನ್ ಮಂಜುನಾಥ್ ಸೇರಿದಂತೆ ಹಲವರು ಮಠಕ್ಕೆ ಭೇಟಿ ಕೊಟ್ಟು ನಿರ್ಮಲಾನಂದ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ
ಮೊದಲ ಹಂತದ ಚುನಾವಣಾ ಅಭ್ಯರ್ಥಿಗಳು ಸ್ವಾಮೀಜಿಗಳ ಆಶೀರ್ವಾದ ಪಡೆದಿದ್ದೇವೆ. ಬೆಂಗಳೂರು ನಗರದ 4 ಅಭ್ಯರ್ಥಿಗಳು, ಮೈಸೂರಿನ ಅಭ್ಯರ್ಥಿ, ಕೋಲಾರದ ಅಭ್ಯರ್ಥಿ, ತುಮಕೂರು, ಮಂಡ್ಯದ ನಾನು ಎಲ್ಲಾ ಜೊತೆಗೂಡಿ ಆಶೀರ್ವಾದ ಪಡೆದಿದ್ದೇವೆ. ವರ್ಷದ ಮೊದಲ ದಿನ ಗುರುಗಳ ಆಶೀರ್ವಾದ ಪಡೆಯೋದು ನಮ್ಮ ಕರ್ತವ್ಯ. ಬಳಿಕ ನಾವೆಲ್ಲ ಒಟ್ಟಾಗಿ ಹೊಸತೊಡಕು ಆಚರಣೆ ಮಾಡುತ್ತೇವೆ ಎಂದರು.ಮುಖ್ಯಂಮತ್ರಿಗಳಿಗೆ ಈಗ ಒಕ್ಕಲಿಗರು ಕಾಣುತ್ತಿದ್ದಾರೆ. ಅವರಿಗೆ ಅಸ್ಥಿರತೆ ಕಾಡುತ್ತಿರೋ ಕಾರಣ ಈಗ ಬರುತ್ತಾ ಇದ್ದಾರೆ. ಇವರ ಸರ್ಕಾರದಲ್ಲಿ ಹೇಗೆ ನಡೆಸಿಕೊಂಡಿದ್ದಾರೆ ಅನ್ನೋದು ಗೊತ್ತಿದೆ. ನಾವಿಲ್ಲಿ ಡಿಕೆ ಶಿವಕುಮಾರ್ ರೀತಿ ಟಿವಿ ಕುಕ್ಕರ್ ಕೊಡುವ ಕಾರ್ಯಕ್ರಮ ಅಲ್ಲ. ಜಸ್ಟ್ ಗೆಟ್ ಟು ಗೆದರ್ ಅಷ್ಟೇ ಎಂದರು.
ಆರ್.ಅಶೋಕ್ ಮಾತನಾಡಿ, ಇಂದು ಶ್ರೀಗಳ ಆರ್ಶೀವಾದ ಪಡೆಯುವುದಕ್ಕೆ ಮೈತ್ರಿ ನಾಯಕರು ಬಂದಿದ್ದೇವೆ. ಶ್ರೀಗಳ ಆರ್ಶೀವಾದ, ಅವರ ಬೆಂಬಲದೊಂದಿಗೆ ಚುನಾವಣೆ ಪ್ರಚಾರಕ್ಕೆ ಹೋಗ್ತೀವಿ ಎಂದರು. ಇಲ್ಲಿ ಆರ್ಶೀವಾದ ಪಡೆದರೆ ಇನ್ನಷ್ಟು ಬೆಂಬಲ ಸಿಗುತ್ತದೆ ಎಂದು ಹೇಳಿದರು.