ಮಧ್ಯಪ್ರದೇಶ,ಏ 10 (DaijiworldNews/AK): 9, 10ನೇ ತರಗತಿಯಲ್ಲಿ ಸಿ ಗ್ರೇಡ್ ವಿದ್ಯಾರ್ಥಿ, 12ನೇ ತರಗತಿ ಫೇಲ್ ಆಗಿದ್ದರು ಸಹ ಛಲ ಬಿಡದೇ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಲೇ ಐಪಿಎಸ್ ಅಧಿಕಾರಿ ಆದ ಮನೋಜ್ ಕುಮಾರ್ ಶರ್ಮಾರ ಯಶಸ್ಸಿನ ಬಗ್ಗೆ ಇಲ್ಲಿ ತೆರೆದಿಡಲಾಗಿದೆ.
ದೇಶದ ಯುವಜನತೆಗೆ, ಕಡು ಬಡತನದಲ್ಲಿ ಓದುವ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿರುವ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ರವರು ಈಗ ಜೆನೆರಲ್ ಇನ್ಸ್ಪೆಕ್ಟರ್ (ಐಜಿ) ಆಗಿ ಭಡ್ತಿ ಪಡೆದಿದ್ದಾರೆ.
ಮನೋಜ್ ಕುಮಾರ್ ರವರು ಮೂಲತಃ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯವರು.. ಚಿಕ್ಕ ವಯಸ್ಸಿನಿಂದಲೇ ಐಎಎಸ್ ಅಧಿಕಾರಿ ಆಗುವ ಕನಸು ಕಂಡವರು ಮನೋಜ್ . ದುರದೃಷ್ಟವಶಾತ್ ಇವರು 9, 10ನೇ ತರಗತಿಯಲ್ಲಿ ಸಿ ಗ್ರೇಡ್ ಸ್ಟೂಡೆಂಟ್ ಆಗಿದ್ದವರು.ಹನ್ನೆರಡನೇ ತರಗತಿಯಲ್ಲಿ ಹಿಂದಿ ವಿಷಯ ಒಂದನ್ನು ಹೊರತು ಪಡಿಸಿ ಮಿಕ್ಕೆಲ್ಲಾ ವಿಷಯಗಳಲ್ಲಿ ಇವರು ಫೇಲ್ ಆಗಿದ್ದರು. ಈ ಮೂಲಕ ಸೋಲು ಕಂಡರು ಸೋಲೇ ಸೋಪಾನ ಎಂದು . ದೇಶದ ಉನ್ನತ ಪರೀಕ್ಷೆ ಹಾಗೂ ಅತಿ ಟಫ್ ಪರೀಕ್ಷೆಯಾದ ಯುಪಿಎಸ್ಸಿ ಸಿಎಸ್ಇ ಪರೀಕ್ಷೆಗೆ ಓದಲು ಆರಂಭಿಸಿದರಂತೆ.ಮನೋಜ್ ಕುಮಾರ್ ರವರು ತಮ್ಮ ಬಗ್ಗೆಯೇ ಒಂದು ಪುಸ್ತಕವನ್ನು 'Twelth Fail' ಎಂಬ ಹೆಸರಿನೊಂದಿಗೆ ಬರೆದಿದ್ದಾರೆ. ಇದರಲ್ಲಿ ಅವರು ತಾವು ಓದುವಾಗ ಗ್ವಾಲಿಯಾರ್ನಲ್ಲಿ ಟೆಂಪೊ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ ಎಂದು ಬರೆದಿದ್ದಾರೆ.
ಇವರ ಜೀವನ, ಸಾಧನೆ ಆಧಾರಿತ ಸಿನಿಮಾವು ಸಹ ಬಂದಿದ್ದು ಅದರ ಹೆಸರು '12TH Fail'. ಯುಪಿಎಸ್ಸಿ ಆಕಾಂಕ್ಷಿಗಳು ನೋಡುವಂತ ಸಿನಿಮಾ ಇದಾಗಿದೆ.ಇವರು 12ನೇ ತರಗತಿ ಪರೀಕ್ಷೆಯಲ್ಲಿ ಫೇಲ್ ಆಗಿದ್ದರು. ಆದರು ತಮ್ಮ ಛಲ ಬಿಡದೇ ಓದಿದ ಮನೋಜ್ ಕುಮಾರ್ ದೇಶದ ಕಠಿಣ ಪರೀಕ್ಷೆಯಾದ ನಾಗರೀಕ ಸೇವೆಗಳ ಪರೀಕ್ಷೆ ಬರೆದು ಐಪಿಎಸ್ ಅಧಿಕಾರಿ ಆಗುವವರೆಗೆ ಹಿಂದೆ ತಿರುಗಿ ನೋಡಲೇ ಇಲ್ಲ. ಮನೋಜ್ ಕುಮಾರ್ ಸಾಧನೆ ಪ್ರತಿಯೊಬ್ಬ ಬಡ ಕುಟುಂಬದ ಯುಪಿಎಸ್ಸಿ ಆಕಾಂಕ್ಷಿಗೆ ಸ್ಪೂರ್ತಿ ನೀಡದೇ ಇರದು.
ಕುಟುಂಬದ ಕಡುಬಡತನ. ಇರಲು ಸಹ ಒಂದು ಮನೆಯೂ ಇರದಂತಹ ಒಂದು ಬಡತನವಾಗಿತ್ತು.ಈ ಹಿನ್ನೆಲೆಯಲ್ಲಿ ಅವರು ಬಿಕ್ಷುಕರೊಂದಿಗೆ ಮಲಗುವ ಸನ್ನಿವೇಶಗಳನ್ನು ಸಹ ಎದುರಿಸಿದ್ದರು. ಈ ಸಮಸ್ಯೆಗಳಿಂದಲೇ ಮೋಟಿವ್ ಆಗಿ ತಮ್ಮ ಕಠಿಣ ಪರಿಶ್ರಮದಿಂದ ಯಶಸ್ಸು ಪಡೆದರು.
ಲ್ರೈಬರಿ ಪೀವನ್ ಆಗಿ ದೆಹಲಿಯಲ್ಲಿ ಕೆಲಸ ಮಾಡಿದ್ದರು. ಇದೇ ವೇಳೆ ಅವರು ದೊಡ್ಡ ದೊಡ್ಡ ವ್ಯಕ್ತಿಗಳ ಕುರಿತು ಓದಿಕೊಂಡಿದ್ದರಂತೆ. ಗೋರ್ಕಿ ಮತ್ತು ಅಬ್ರಹಾಂ ಲಿಂಕನ್ ರಿಂದ ಮುಕ್ತಬೋಧ್ ವರೆಗೆ ಓದಿದ್ದರಂತೆ. ಈ ಬುಕ್ಗಳನ್ನು ಓದಿದ ನಂತರ ತಮ್ಮ ಬದುಕಿನ ಆಯಾಮಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರ ಬಗ್ಗೆ ಹೇಳಿಕೊಂಡಿದ್ದಾರೆ.
ಮನೋಜ್ ಕುಮಾರ್ ರವರು 12ನೇ ತರಗತಿಯಲ್ಲಿ ಓದುವಾಗ ಒಂದು ಹುಡುಗಿಯನ್ನು ಪ್ರೀತಿಸಿದ್ದರಂತೆ. ಆದರೆ ಅವರು ಎಂದಿಗೂ ಪ್ರೀತಿಯನ್ನು ವ್ಯಕ್ತಪಡಿಸಲೇ ಇಲ್ಲವಂತೆ. ಆದರೆ ಕೊನೆಗೂ ಪ್ರಪೋಸ್ ಮಾಡಿ ಮದುವೆ ಮಾಡಿಕೊಂಡರು.
ತಮ್ಮ ಕಠಿಣ ಪರಿಶ್ರಮದಿಂದ ಯುಪಿಎಸ್ಸಿ ಪರೀಕ್ಷೆ ಬರೆದು ಯಶಸ್ಸು ಪಡೆದ ಮನೋಜ್ ಕುಮಾರ್ 2005 ರಲ್ಲಿ ಮಹಾರಾಷ್ಟ್ರ ಕೇಡರ್ನಲ್ಲಿ ಐಪಿಎಸ್ ಅಧಿಕಾರಿ ಆದರು. ಪ್ರಸ್ತುತ ಮುಂಬೈ ಪಶ್ಚಿಮ ವಿಭಾಗದಲ್ಲಿ ಹೆಚ್ಚುವರಿ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.