ಉತ್ತರಪ್ರದೇಶ, ಏ 09 (DaijiworldNews/AK): ಐಎಫ್ ಎಸ್ ಅಧಿಕಾರಿಯಾಗಿರುವ ಆರುಷಿ ಮಿಶ್ರಾ ತಮ್ಮ ಕಠಿಣ ಪರಿಶ್ರಮದಿಂದ ಯುಪಿಎಸ್ ಸಿ ಭಾರತೀಯ ಅರಣ್ಯ ಸೇವೆಯಲ್ಲಿ 2ನೇ ರ್ಯಾಂಕ್ ಗಳಿಸಿದ್ದಾರೆ. ಮಾತ್ರವಲ್ಲದೇ 3 ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಾಧನೆಯ ಹಾದಿ ತಿಳಿಯೋಣ.
ಭಾರತೀಯ ಅರಣ್ಯ ಸೇವೆಯಲ್ಲಿ ಅಧಿಕಾರಿಯಾಗಿರುವ ಆರುಷಿ ಮಿಶ್ರಾ ಅವರು 31 ಜನವರಿ 1991 ರಂದು ಪ್ರಯಾಗರಾಜ್ ನಲ್ಲಿ ಜನಿಸಿದ್ದು. ಅವರ ತಂದೆ ಅಜಯ್ ಮಿಶ್ರಾ ಹಿರಿಯ ವಕೀಲರು, ತಾಯಿ ನೀತಾ ಮಿಶ್ರಾ ಉಪನ್ಯಾಸಕರಾಗಿದ್ದಾರೆ. ಆರುಷಿ ಅವರ ಕಿರಿಯ ಸಹೋದರ ಅರ್ನವ್ ಮಿಶ್ರಾ ಉತ್ತರ ಪ್ರದೇಶದಲ್ಲಿ ಡೆಪ್ಯುಟಿ ಕಲೆಕ್ಟರ್ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಆರುಷಿ ಮಿಶ್ರಾ ಅವರ ಪತಿ ಐಎಎಸ್ ಚರ್ಚಿತ್ ಗೌರ್ ಅವರು ಆಗ್ರಾ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರಾಗಿದ್ದಾರೆ.
ಪ್ರಸ್ತುತ ಆಗ್ರಾ ಅರಣ್ಯ ಇಲಾಖೆಯಲ್ಲಿ ಉಪ ಡಿಎಫ್ ಓ ಆಗಿರುವ ಆರುಷಿ ಮಿಶ್ರಾ ಅವರು ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ಅವರು 10 ನೇ ICSE ಬೋರ್ಡ್ ಪರೀಕ್ಷೆಯಲ್ಲಿ 95.14 ಶೇಕಡಾ ಮತ್ತು 12 ನೇ CBSE ಬೋರ್ಡ್ ಪರೀಕ್ಷೆಯಲ್ಲಿ 91.2 ಶೇಕಡಾ ಅಂಕಗಳನ್ನು ಗಳಿಸಿದ್ದಾರೆ. ಬಿ.ಟೆಕ್ ಮಾಡಿದ ನಂತರ ಆರುಷಿ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು.
IFS ಆರುಷಿ ಮಿಶ್ರಾ UPSC ಪರೀಕ್ಷೆಗೆ ತಯಾರಿ ನಡೆಸಲು ಕೋಚಿಂಗ್ ಸಹಾಯವನ್ನು ತೆಗೆದುಕೊಂಡರು. ಅನೇಕ ಅಣಕು ಪರೀಕ್ಷೆಗಳನ್ನು ನೀಡಿದ್ದರು. UPSC ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರ ಅವರು ಕೋಚಿಂಗ್ ನಲ್ಲಿ ಕಲಿಸಲು ಪ್ರಾರಂಭಿಸಿದರು. ಇದರೊಂದಿಗೆ ಉದ್ಯೋಗ ಪತ್ರಿಕೆಗಳಲ್ಲಿ ಕೆಲಸ ಹುಡುಕುತ್ತಿದ್ದರು.
IFS ಆರುಷಿ ಮಿಶ್ರಾ 2018 ರಲ್ಲಿ UPSC ಪರೀಕ್ಷೆಯ ಭಾರತೀಯ ಅರಣ್ಯ ಸೇವಾ ಪರೀಕ್ಷೆಯಲ್ಲಿ (IFoS) ಎರಡನೇ ರ್ಯಾಂಕ್ ಗಳಿಸಿದ್ದರು. ಈ ಹಿಂದೆ ಯುಪಿಎಸ್ ಸಿ ಪರೀಕ್ಷೆಯಲ್ಲಿ 229 ರ್ಯಾಂಕ್ ನೊಂದಿಗೆ ಐಆರ್ಎಸ್ ಹುದ್ದೆಯನ್ನು ನೀಡಲಾಗಿತ್ತು. ಉತ್ತರ ಪ್ರದೇಶ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ (UPPCS ಪರೀಕ್ಷೆ), ಅವರಿಗೆ 16 ನೇ ರ್ಯಾಂಕ್ ಪಡೆದಿದ್ದರಿಂದ DSP ಹುದ್ದೆಯನ್ನು ನೀಡಲಾಯಿತು.
IFS ಆರುಷಿ ಮಿಶ್ರಾ ಅವರು ನವೆಂಬರ್ 2021 ರಲ್ಲಿ IAS ಚರ್ಚಿತ್ ಗೌರ್ ಅವರನ್ನು ವಿವಾಹವಾದರು. ಗೌರ್ 2016 ರ ಬ್ಯಾಚ್ ನ ಅಧಿಕಾರಿ ಮತ್ತು ಆರುಷಿ ಮಿಶ್ರಾ 2019ರ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.