ಮುಂಬೈ,ಏ 08 (DaijiworldNews/AK): ನಾನು ದನದಮಾಂಸ ಸೇರಿದಂತೆ ಯಾವುದೇ ಮಾಂಸ ತಿನ್ನುವುದಿಲ್ಲ, ನಾನೊಬ್ಬಳು ಹೆಮ್ಮೆಯ ಹಿಂದು ಎಂದು ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ನಟಿ ಕಂಗನಾ ರನೌತ್ ಹೇಳಿದ್ದಾರೆ.
ನಾನು ದನದಮಾಂಸವನ್ನಾಗಲಿ ಅಥವಾ ಇನ್ಯಾವುದೇ ರೀತಿಯ ಮಾಂಸವನ್ನು ತಿನ್ನುವುದಿಲ್ಲ. ನನ್ನ ಬಗ್ಗೆ ಸಂಪೂರ್ಣವಾಗಿ ಆಧಾರರಹಿತ ವದಂತಿಗಳನ್ನು ಹಬ್ಬಿಸುತ್ತಿರುವುದು ನಾಚಿಕೆಗೇಡಿನ ಸಂಗತಿ.
ನಾನು ದಶಕಗಳಿಂದ ಯೋಗ ಮತ್ತು ವೇ ದ ಆಧರಿತ ಜೀವನ ಶೈಲಿಯನ್ನುಅನುಸರಿಸುತ್ತಿದ್ದೇನೆ ಹಾಗೂ ಉತ್ತೇ ಜಿಸುತ್ತಿದ್ದೇ ನೆ. ವದಂ ತಿ ಹಬ್ಬಿಸುವ ತಂತ್ರಗಳಿಂದ ನನ್ನ ಹೆಸರಿಗೆ ಕಳಂಕ ಹಚ್ಚಲು ಸಾಧ್ಯವಿಲ್ಲ. ನಾನು ಏನೆಂಬುದು ನನ್ನ ಜನರಿಗೆ ಗೊತ್ತಿದೆ. ನಾನೊಬ್ಬಳು ಹೆಮ್ಮೆಯ ಹಿಂದು ಎಂಬುದು ಅವರಿಗೆ ಗೊತ್ತಿದೆ. ಅವರನ್ನು ಯಾರೂ ಹಾದಿ ತಪ್ಪಿಸಲು ಸಾಧ್ಯವಿಲ್ಲ ಎಂ ದು ಕಂಗನಾ ಎಕ್ಸ್ ಪೋಸ್ಟ್ನಲ್ಲಿ ವದಂತಿ ವಿರುದ್ಧ ಕಿಡಿಕಾರಿದ್ದರೆ.
ಸಾಮಾಜಿಕ ಮಾಧ್ಯಮದಲ್ಲಿ ಕಂಗನಾ ದನದಮಾಂಸ ತಿನ್ನುತ್ತಾರೆ ಎಂದು ಕೆಲವರು ಪೋಸ್ಟ್ ಮಾಡಿದ ಬೆನ್ನಲ್ಲೇ ಕಂಗನಾ ಸ್ಪಷ್ಟನೆ ಕೊಟ್ಟಿದ್ದಾರೆ. ಬೀ ಫ್ ಅಥವಾ ಯಾವುದೇ ಇತರೆ ಮಾಂಸ ತಿನ್ನುವುದರಲ್ಲಿ ತಪ್ಪಿಲ್ಲ. ಧರ್ಮ ಕ್ಕೂ ಅದಕ್ಕೂ ಸಂ ಬಂ ಧವಿಲ್ಲ. 8 ವರ್ಷ ಗಳ ಹಿಂ ದೆ ಕಂಗನಾ ಸಸ್ಯಾಹಾರಿಯಾಗಿ ಬದಲಾದರು ಎಂ ಬ ಸತ್ಯ ಗುಟ್ಟಾಗಿ ಏನೂ ಉಳಿದಿಲ್ಲ. ಅವರು ಈಗಲೂ ಒಂದು ಧರ್ಮ ವನ್ನು ನಂಬುವುದಿಲ್ಲ. ಅವರ ಸಹೋ ದರ ಬೀಫ್ ತಿನ್ನುತ್ತಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ.
ನನಗೆ ದನದಮಾಂಸ ಇಷ್ಟ ಮತ್ತು ನಾನು ಅದನ್ನು ತಿನ್ನುತ್ತೇ ನೆ ಎಂ ದು ಹಿಂದೊಮ್ಮೆ ಕಂಗನಾ ಟ್ವೀಟ್ ಮಾಡಿದ್ದರು ಎಂಬುದಾಗಿ ಮಹಾರಾಷ್ಟ್ರ
ವಿರೋ ಧ ಪಕ್ಷದ ನಾಯಕ ವಿಜಯ್ ವಾಡೆಟ್ಟಿವಾರ್ ಹೇಳಿದ್ದರು.