ಪಂಜಾಬ್, ಏ 06 (DaijiworldNews/AA): ಪಂಜಾಬ್ನ ಗುರುದಾಸ್ಪುರ್ ಮೂಲದ ರುಕ್ಮಣಿ ರಿಯರ್ 6ನೇ ತರಗತಿಯಲ್ಲಿ ಫೇಲ್ ಆಗಿದ್ದರು. ಈ ಫೇಲ್ ನಿಂದಲೇ ಸ್ಪೂರ್ತಿಗೊಂಡ ಅವರು ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ 2ನೇ ರ್ಯಾಂಕ್ ನಲ್ಲಿ ಯುಪಿಎಸ್ಸಿ ಸಿವಿಲ್ ಸೇವೆ ಪರೀಕ್ಷೆ ಪಾಸ್ ಮಾಡಿದ್ದರು. ಅವರ ಸ್ಟೋರಿ ಇಲ್ಲಿದೆ.
ರುಕ್ಮಣಿ ರಿಯರ್ ಪಂಜಾಬ್ ಮೂಲದ ಗುರುದಾಸ್ಪುರ್ ನವರು. ಯಾವುದೇ ತರಬೇತಿ ಇಲ್ಲದೇ ತಮ್ಮ ಕನಸನ್ನು ಮೊದಲ ಪ್ರಯತ್ನದಲ್ಲಿ ಅಖಿಲ ಭಾರತ ರ್ಯಾಂಕ್ 2 ನೇ ಸ್ಥಾನದೊಂದಿಗೆ ಐಎಎಸ್ ಅಧಿಕಾರಿಯಾದರು.ರುಕ್ಮಣಿ ರಿಯರ್ ತಮ್ಮ ಬಾಲ್ಯ ಶಿಕ್ಷಣದಲ್ಲಿ ಅಷ್ಟೊಂದು ಬ್ರಿಲಿಯಂಟ್ ಅಲ್ಲ. 6ನೇ ತರಗತಿ ಫೇಲ್ ಆಗಿದ್ದರಂತೆ. ಆದರೂ ಸಹ ತಮ್ಮ ಪೋಷಕರು, ಶಿಕ್ಷಕರು, ಸಹಪಾಠಿಗಳು ಏನೆಂದುಕೊಳ್ಳುತ್ತಾರೆ, ಯಾವುದನ್ನು ಅಲೋಚಿಸದೇ ಧೈರ್ಯವಾಗಿ ಮುನ್ನಡೆದ ಪ್ರತಿಭೆ ಇವರು. ಫೇಲ್ ಆಗಿರುವುದೇ ಅವರಿಗೆ ದೊಡ್ಡ ಸ್ಪೂರ್ತಿ ನೀಡಿದೆ.
ರುಕ್ಮಣಿ ರಿಯರ್ ತಮ್ಮ ಬಾಲ್ಯ ಶಿಕ್ಷಣವನ್ನು ಗುರುದಾಸ್ಪುರ್ನಲ್ಲೇ ಮುಗಿಸಿದರು. 4ನೇ ತರಗತಿವರೆಗೆ ದಾಲ್ಹೌಸ್ನ ಸೆಕ್ರೆಡ್ ಹಾರ್ಟ್ ಸ್ಕೂಲ್ ನಲ್ಲಿ ಓದಿದರು. ತಮ್ಮ 12ನೇ ತರಗತಿ ವಿದ್ಯಾಭ್ಯಾಸದ ನಂತರ ಪದವಿಯನ್ನು ಸಮಾಜ ವಿಜ್ಞಾನ ವಿಷಯದಲ್ಲಿ ಗುರುನಾನಕ್ ದೇವ್ ಯುನಿವರ್ಸಿಟಿ, ಅಮೃತ್ಸರ್ ನಲ್ಲಿ ಪಡೆದರು. ನಂತರ ಮುಂಬೈ ನ ಟಾಟಾ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಸಮಾಜ ವಿಜ್ಞಾನ ವಿಷಯದಲ್ಲೇ ಓದಿ ಗೋಲ್ಡ್ ಮೆಡಲಿಸ್ಟ್ ಪಡೆದಿದ್ದರು.
ತಮ್ಮ ಮಾಸ್ಟ್ರ್ ಡಿಗ್ರಿ ನಂತರ ರುಕ್ಮಣಿ ರಿಯರ್ ರವರು ಎನ್ಜಿಒ'ಗಳಾದ ಮೈಸೂರಿನ ಅಶೋದಯ ಮತ್ತು ಅನ್ನಪೂರ್ಣ ಮಹಿಳಾ ಮಂಡಳಿ, ಮುಂಬೈ ನಲ್ಲಿ ಪ್ಲಾನಿಂಗ್ ಕಮಿಷನ್ ಅಧೀನದಲ್ಲಿ ಇಂಟರ್ನ್ಶಿಪ್ ಪಡೆದಿದ್ದರು. ಈ ಸಮಯದಲ್ಲಿ ಅವರು ಸಿವಿಲ್ ಸೇವೆಗಳಲ್ಲಿ ಆಕರ್ಷಿತರಾಗಿ, ನಂತರ ಯುಪಿಎಸ್ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದರಂತೆ.ಎನ್ಜಿಒ'ಗಳಲ್ಲಿ ಇಂಟರ್ನ್ಶಿಪ್ ಪಡೆದ ನಂತರ ರುಕ್ಮಣಿ ರಿಯರ್ ಸಿವಿಲ್ ಸೇವೆಗಳ ಪರೀಕ್ಷೆಗೆ ಓದಿ ಮೊದಲ ಪ್ರಯತ್ನದಲ್ಲೇ ಅಖಿಲ ಭಾರತ ರ್ಯಾಂಕ್ 2ನೇ ಸ್ಥಾನದಲ್ಲಿ ಸಿಎಸ್ಇ ಪಾಸ್ ಮಾಡಿದರು. ಆದರೆ ಯಾವುದೇ ಕೋಚಿಂಗ್ಗೆ ಸೇರಿರಲಿಲ್ಲ. ಸ್ವತಃ ಅಭ್ಯಾಸ, ಇವರದ್ದಾಗಿತ್ತು.
ಯುಪಿಎಸ್ಸಿ ಸಿಎಸ್ಇ ಪರೀಕ್ಷೆಯನ್ನು 2011 ರಲ್ಲಿ AIR 2 ದೊಂದಿಗೆ ಪಾಸ್ ಮಾಡಿದರು. ತಮ್ಮ ಐಎಎಸ್ ಕನಸನ್ನು ಲೇಟಾಗಿ ತೆಗೆದುಕೊಂಡರೂ ಸಹ ಮೊದಲ ಪ್ರಯತ್ನದಲ್ಲೇ ಪಾಸ್ ಮಾಡುವ ಮೂಲಕ ಯಶಸ್ಸು ಪಡೆದರು