ಛತ್ತೀಸ್ ಗಢ , ಏ 03(DaijiworldNews/AK): ಕೊರೊನಾಗೆ ತುತ್ತಾಗಿ 4 ತಿಂಗಳು ಆಸ್ಪತ್ರೆಯಲ್ಲಿದ್ದರೂ ದೇಶದ ಕಠಿಣ ಪರೀಕ್ಷೆಯಾದ ಯುಪಿಎಸ್ ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ತರುಣಿ ಅವರ ಯಶಸ್ಸಿನ ಗುಟ್ಟು ಇಲ್ಲಿದೆ.
ತರುಣಿ ಪಾಂಡೆ ಅವರು ಛತ್ತೀಸ್ ಗಢ ಮತ್ತು ಪಶ್ಚಿಮ ಬಂಗಾಳದಲ್ಲಿ ಬೆಳೆದರು. ಬಳಿಕ ತಮ್ಮ ಶಾಲಾ ಶಿಕ್ಷಣವನ್ನು ಜಾರ್ಖಂಡ್ ನಲ್ಲಿ ಪೂರ್ಣಗೊಳಿಸಿದರು. 10ನೇ ತರಗತಿಯ ನಂತರ ಆರ್ಥಿಕ ಸಮಸ್ಯೆ ಎದುರಾಗಿ ಖಾಸಗಿ ಶಾಲೆಯಿಂದ ಸರ್ಕಾರಿ ಶಾಲೆಗೆ ಹೋದರು. ಸರ್ಕಾರಿ ಶಾಲೆಯಲ್ಲಿ 12 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದರು.
ಐಎಎಸ್ ತರುಣಿ ಪಾಂಡೆ 1 ನಂತರ ಸಿಕ್ಕಿಂನ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದರು. ಇಲ್ಲಿ ಅವರು ಎರಡು ವರ್ಷಗಳ ಕಾಲ ಅಧ್ಯಯನ ಮಾಡಿದರು. ಆದರೆ, ಆರೋಗ್ಯ ಸಮಸ್ಯೆಯಿಂದಾಗಿ ಎಂಬಿಬಿಎಸ್ ವ್ಯಾಸಂಗವನ್ನು ಅರ್ಧಕ್ಕೆ ಬಿಡಬೇಕಾಯಿತು.
ಸ್ವಲ್ಪ ಸಮಯದ ನಂತರ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಸಾಹಿತ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದರು. ತರುಣಿ ಪಾಂಡೆ ಎಂದಿಗೂ ಆಡಳಿತ ಅಧಿಕಾರಿಯಾಗಲು ಆಸೆ ಇರಲಿಲ್ಲ. ಆದರೆ ವೈದ್ಯೆ ಆಗಬೇಕು ಎಂಬುವುದು ಅವರ ಕನಸಾಗಿತ್ತು.
2016 ರಲ್ಲಿ ತರುಣಿ ಅವರ ಸೋದರ ಮಾವ ಶ್ರೀನಗರದಲ್ಲಿ ಹುತಾತ್ಮರಾಗಿದ್ದರು. ಅವರು ಸಿಆರ್ ಪಿಎಫ್ ಯೋಧರಾಗಿದ್ದರು. ಅದರ ನಂತರ ತರುಣಿ ತಮ್ಮ ಸಹೋದರಿಯ ಉದ್ಯೋಗಕ್ಕೆ ಸಂಬಂಧಿಸಿದಂತೆ ಅನೇಕ ಐಎಎಸ್ ಮತ್ತು ರಾಜಕಾರಣಿಗಳನ್ನು ಭೇಟಿಯಾಗ ಬೇಕಾಯಿತು.
ಒಳ್ಳೆಯ ಐಎಎಸ್ ಅಧಿಕಾರಿ ಸೋದರಿಯರಿಗೆ ಸಾಕಷ್ಟು ಸಹಾಯ ಮಾಡಿದರು. ಆಗ ತರುಣಿ ತಾನು ಸಹ ಇವರಂತೆ ನಾಗರಿಕ ಸೇವೆ ಸೇರಬೇಕು ಎಂದು ನಿರ್ಧರಿಸಿದರು. ಆದರೆ ವಯೋಮಿತಿ ಕಾರಣದಿಂದ ಕೇವಲ ಒಮ್ಮೆ ಮಾತ್ರ ಯುಪಿಎಸ್ ಸಿ ಪರೀಕ್ಷೆ ತೆಗೆದುಕೊಳ್ಳವ ಅವಕಾಶ ಇತ್ತು. 2021ರಲ್ಲಿ ತರುಣಿ ಅವರಿಗೆ ಯುಪಿಎಸ್ ಸಿ ಪರೀಕ್ಷೆ ಮೊದಲ ಮತ್ತು ಕೊನೆಯ ಪ್ರಯತ್ನವಾಗಿತ್ತು. ದುರದೃಷ್ಟ ಅಂದರೆ 2021ರ ಸಮಯದಲ್ಲಿ ತರುಣಿ ಕೊರೊನಾಗೆ ತುತ್ತಾದರು. ಕೋವಿಡ್ ಸೋಂಕಿತ ಸ್ಥಿತಿಯಲ್ಲಿ ಅವರು UPSC ಪರೀಕ್ಷೆಯನ್ನು ಬರೆದರು. ತರುಣಿ ಸುಮಾರು ನಾಲ್ಕು ತಿಂಗಳ ಕಾಲ ಆಸ್ಪತ್ರೆಯಲ್ಲಿಯೇ ಇದ್ದರು. ಸ್ವಯಂ ಅಧ್ಯಯನದಲ್ಲಿ ನಂಬಿಕೆ ಇಟ್ಟಿದ್ದ ತರುಣಿ ಯೂಟ್ಯೂಬ್ ನೆರವಿನಿಂದ ವಿದ್ಯಾಭ್ಯಾಸ ಮಾಡಿದರು. ಪುಸ್ತಕಗಳನ್ನು ಸಹ ಓದಲಿಲ್ಲ. ಆದರೂ ಪರೀಕ್ಷೆಯಲ್ಲಿ ಯಶಸ್ವಿಯಾದರು.
ತರುಣಿ ಪಾಂಡೆ 2021 ರಲ್ಲಿ ಮೊದಲ ಬಾರಿಗೆ UPSC ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಕಾಣಿಸಿಕೊಂಡರು. ಮೊದಲ ಪ್ರಯತ್ನದಲ್ಲಿಯೇ 14ನೇ ರ್ಯಾಂಕ್ ನೊಂದಿಗೆ ತೇರ್ಗಡೆಯಾದರು.