ಉತ್ತರಪ್ರದೇಶ, ಏ.1(DaijiworldNews/AK): ಯುಪಿಎಸ್ಸಿ ಪರೀಕ್ಷೆಯು ದೇಶದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿದ್ದು, ಇದನ್ನು ಕೆಲವರು ಮೊದಲ ಪ್ರಯತ್ನದಲ್ಲಿ, ಇನ್ನೂ ಕೆಲವರು ಎರಡು-ಮೂರು ಪ್ರಯತ್ನಗಳ ಬಳಿಕ ಭೇದಿಸುತ್ತಾರೆ. ಹೀಗೆ ತನ್ನ ಮೊದಲ ಪ್ರಯತ್ನದಲ್ಲೇ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ 7ನೇ ರ್ಯಾಂಕ್ ಗಳಿಸುವಲ್ಲಿ ಯಶಸ್ವಿಯಾದ ರಾಧಾ ಅವಸ್ತಿ ಅವರ ಸಮರ್ಪಣೆ ಎಲ್ಲರಿಗೂ ಮಾದರಿ. ಅವರ ಸಾಧನೆಯ ಹಾದಿ ಇಲ್ಲಿದೆ.
ರಾಧಾ ಅವಸ್ತಿ ಮೂಲತಃ ಉತ್ತರ ಪ್ರದೇಶದ ಬಂದಾ ಜಿಲ್ಲೆಯ ಪಚ್ನೇಹಿ ಎಂಬ ಸಣ್ಣ ಹಳ್ಳಿಯ ರೈತ ಅನಿಲ್ ಅವಸ್ತಿ ಮಗಳು. ರೈತ ಅನಿಲ್ ಅವಸ್ತಿ ಅವರು 22 ವರ್ಷಗಳ ಹಿಂದೆ ತನ್ನ ಕುಟುಂಬದೊಂದಿಗೆ, ತನ್ನ ಮನೆಯನ್ನು ತೊರೆದು ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ನಿಟ್ಟಿನಲ್ಲಿ ಲಕ್ನೋಗೆ ಸ್ಥಳಾಂತರಗೊಂಡರು.
ಆದರೆ ಆಕೆಯ ಕುಟುಂಬದಿಂದ, ವಿಶೇಷವಾಗಿ ಆಕೆಯ ಪೋಷಕರಿಂದ ಪಡೆದ ಬೆಂಬಲ ಮತ್ತು ಪ್ರೋತ್ಸಾಹವನ್ನು ಕಾಣಬಹುದು. ಪ್ರಸ್ತುತ, ಅನಿಲ್ ಅವರ ಮಗ ಗುಜರಾತ್ ನಲ್ಲಿ ಇಂಜಿನಿಯರ್, ಅವರ ಹಿರಿಯ ಮಗಳು ಇಂಟರ್ ಕಾಲೇಜ್ ನಲ್ಲಿ ಉಪನ್ಯಾಸಕಿ, ಅವರ ಎರಡನೇ ಮಗಳು ಬ್ಯಾಂಕ್ ಮ್ಯಾನೇಜರ್, ಮತ್ತು ಅವರ ಮೂರನೇ ಮಗಳು ರಾಧಾ ಅವಸ್ತಿ ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ.
ರಾಧಾ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿ, ಲಕ್ನೋದಲ್ಲಿ ಬಿಎಸ್ ಸಿ ಪದವಿಯನ್ನು ಪಡೆದರು. ಎಂಟೆಕ್ ಓದುತ್ತಿರುವಾಗಲೇ ರಾಧಾ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 2023ರಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆದ ಅವರು ತಮ್ಮ ಮೊದಲ ಪ್ರಯತ್ನಲ್ಲೇ ಯುಪಿಎಸ್ಸಿ ಪರೀಕ್ಷೆಯನ್ನು ಭೇದಿಸುವಲ್ಲಿ ಯಶಸ್ಸಿಯಾಗುತ್ತಾರೆ. ಈ ಮೂಲಕ ಹೆಣ್ಣು ಮಕ್ಕಳು ಮಾಡಲಾಗದ ಕೆಲಸವಿಲ್ಲ. ಕಷ್ಟಪಟ್ಟು ದುಡಿದರೆ ಯಾರು ಬೇಕಾದರೂ ಸಾಧಿಸಬಹುದು ಎಂಬುವುದಕ್ಕೆ ಇವರೇ ಸಾಕ್ಷಿ.