ಬಿಹಾರ,ಮಾ 24(DaijiworldNews/AK):ಬಿಹಾರದಲ್ಲಿ ಜೆಡಿಯು 2024ರ ಲೋಕಸಭೆ ಚುನಾವಣೆಗೆ 16 ಅಭ್ಯರ್ಥಿಗಳನ್ನು ಘೋಷಿಸಿದೆ. ಎನ್ಡಿಎ ಈಗಾಗಲೇ ಸೀಟು ಹಂಚಿಕೆ ಮಾಡಿದ್ದು, ಬಿಜೆಪಿಗೆ 17 ಸ್ಥಾನ, ಜೆಡಿಯುಗೆ 16, ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷಕ್ಕೆ 5 ಸ್ಥಾನ, ಜಿತನ್ ರಾಮ್ ಮಾಂಝಿ ಅವರ ‘ಹಮ್’ ಪಕ್ಷಕ್ಕೆ ಒಂದು ಸ್ಥಾನ ಮತ್ತು ಉಪೇಂದ್ರ ಕುಶ್ವಾಹ ಅವರಿಗೆ ಒಂದು ಸ್ಥಾನ ನೀಡಲು ಒಪ್ಪಿಗೆ ನೀಡಲಾಗಿದೆ.
ಇಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷವಾದ ಜನತಾದಳ ಯುನೈಟೆಡ್ ತನ್ನ ಎಲ್ಲಾ 16 ಸ್ಥಾನಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ.
ಶಿವರ್: ಲವ್ಲಿ ಆನಂದ್
ಸೀತಾಮರ್ಹಿ: ದೇವೇಶ್ ಚಂದ್ರ ಠಾಕೂರ್
ವಾಲ್ಮೀಕಿನಗರ: ಸುನಿಲ್ ಮಹತೋ
ಸುಪಾಲ್: ದಿಲೇಶ್ವರ ಕಾಮತ್
ಮಾಧೇಪುರ: ದಿನೇಶ್ ಚಂದ್ರ ಯಾದವ್
ಜೆಹನಾಬಾದ್: ಚಂದೇಶ್ವರ ಪ್ರಸಾದ್
ಸಿವಾನ್: ವಿಜಯಲಕ್ಷ್ಮಿ ದೇವಿ
ಗೋಪಾಲಗಂಜ್: ಅಲೋಕ್ ಸುಮನ್
ಪೂರ್ಣಿಯಾ: ಸಂತೋಷ್ ಕುಶ್ವಾಹ
ಕಿಶನ್ಗಂಜ್: ಮಾಸ್ಟರ್ ಮುಜಾಹಿದ್ ಆಲಂ
ಕತಿಹಾರ್: ದುಲಾಲಚಂದ್ ಗೋಸ್ವಾಮಿ
ಮುಂಗೇರ್: ರಾಜೀವ್ ರಂಜನ್ (ಲಾಲನ್) ಸಿಂಗ್
ಬಂಕಾ: ಗಿರ್ಧಾರಿ ಯಾದವ್
ಭಾಗಲ್ಪುರ್: ಅಜಯ್ ಮಂಡಲ್
ನಳಂದ: ಕೌಶಲೇಂದ್ರ ಕುಮಾರ್
ಝಂಜರಪುರ: ರಾಮಪ್ರೀತ್ ಮಂಡಲ್
2019ರ ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಭರ್ಜರಿ ಗೆಲುವು ಸಾಧಿಸಿತ್ತು ಕಳೆದ ಲೋಕಸಭೆ ಚುನಾವಣೆಯಲ್ಲಿ 2019 ರಲ್ಲಿ ಎನ್ಡಿಎ ದೊಡ್ಡ ಗೆಲುವು ಸಾಧಿಸಿತ್ತು. ಕಳೆದ ಚುನಾವಣೆಯಲ್ಲಿ ಜೆಡಿಯು ಮತ್ತು ಬಿಜೆಪಿ ತಲಾ 17 ಸ್ಥಾನಗಳಲ್ಲಿ ಮತ್ತು ಎಲ್ಜೆಪಿ ಆರು ಸ್ಥಾನಗಳಲ್ಲಿ ಸ್ಪರ್ಧಿಸಿದ್ದವು. ಇದರಲ್ಲಿ 17 ಸ್ಥಾನಗಳಲ್ಲಿ ಬಿಜೆಪಿ 17 ಮತ್ತು ಜೆಡಿಯು 16 ಸ್ಥಾನಗಳನ್ನು ಗೆದ್ದಿತ್ತು.