ಗುವಾಹಟಿ, ಮಾ 24(DaijiworldNews/AA): ಸಮನ್ಸ್ ಗಳಿಗೆ ಉತ್ತರಿಸದೇ ತಮ್ಮನ್ನು ಬಂಧಿಸುವಂತೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಇಡಿಗೆ ಖುದ್ದು ಆಹ್ವಾನ ನೀಡಿದರು ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜಕೀಯ ಸಹಾನುಭೂತಿ ಪಡೆಯಲು ಅವರು ಮಾಡಿದ ಉಪಾಯ ಆಗಿರಲೂಬಹುದು. ಒಬ್ಬ ವ್ಯಕ್ತಿಯು ಇ.ಡಿಯ 9 ಸಮನ್ಸ್ ಗಳಿಗೆ ನಿರ್ಲಕ್ಷಿಸಿದ್ದಾನೆ ಎಂದಾದರೆ, ಅದು ಬಂಧನಕ್ಕೆ ಉದ್ದೇಶಪೂರ್ವಕವಾಗಿ ಆಹ್ವಾನಿಸಿದಂತೆ. ಒಂದು ವೇಳೆ ಕೇಜ್ರಿವಾಲ್ ಅವರು ಮೊದಲ ಸಮನ್ಸ್ ಗಳಿಗೆ ಉತ್ತರಿಸಿದ್ದಲ್ಲಿ ಅವರನು ಬಂಧಿಸುತ್ತಿರಲಿಲ್ಲ ಎಂದರು.
ಈ ಹಿಂದೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಇ.ಡಿ ಸಮನ್ಸ್ ಜಾರಿ ಮಾಡಿದಾಗ ಅವರು ವಿಚಾರಣೆಗೆ ಹಾಜರಾಗಿದ್ದರು. ಆದರೆ ಕೇಜ್ರಿವಾಲ್ ಅವರ ನಡವಳಿಕೆ ರೂಢಿ ತಪ್ಪಿತ್ತು ಎಂದು ತಿಳಿಸಿದ್ದಾರೆ.