ನವದೆಹಲಿ, ಮಾ 23(DaijiworldNews/ AK): ಮಾಡೆಲಿಂಗ್ ಜಗತ್ತಿನಲ್ಲಿ ಹೆಸರು ಗಳಿಸಿರುವ ಐಶ್ವರ್ಯಾ ಶಿಯೋರನ್ ಯುಪಿಎಸ್ಸಿ ಪರೀಕ್ಷೆಯಲ್ಲಿ 93ನೇ ರ್ಯಾಂಕ್ ಗಳಿಸುವ ಮೂಲಕ ಹೊಸ ಬಾಷ್ಯಾ ಬರೆದವರು.
ಫ್ಯಾಷನ್, ಮಾಡೆಲಿಂಗ್ ಮತ್ತು ನಟನೆಯ ಪ್ರಪಂಚದ ಜನರು ಶಿಕ್ಷಣ ಮತ್ತು ಪುಸ್ತಕಗಳೊಂದಿಗೆ ನಂಟು ಅಷ್ಟಕಷ್ಟೇ ಅನ್ನುವ ಮಾತು ಇದೆ. ಆದರೆ ಐಶ್ವರ್ಯ ಶಿಯೋರನ್ ಟಾಪ್ ಮಾಡೆಲ್ ಆದ ನಂತರ ಯುಪಿಎಸ್ಸಿ ಫಲಿತಾಂಶದಲ್ಲಿ 93 ರ್ಯಾಂಕ್ ಗಳಿಸಿದ್ದಾರೆ.
2019 ರ ಯುಪಿಎಸ್ಸಿ ಪರೀಕ್ಷೆಯಲ್ಲಿ 92ನೇ ರ್ಯಾಂಕ್ ಪಡೆದು ತೇರ್ಗಡೆಯಾಗಿದ್ದಾರೆ. ಈ ಯಶಸ್ಸಿನ ನಂತರ, ಜನರು ಐಶ್ವರ್ಯ ಅವರನ್ನು ಬ್ಯೂಟಿ ವಿಥ್ ಬ್ರೈನ್ ಎಂದು ಕರೆಯುತ್ತಿದ್ದಾರೆ.
ದ್ವಿತೀಯ ಪಿಯುಸಿಯಲ್ಲಿ ಐಶ್ವರ್ಯಾ, ವಿಜ್ಞಾನ ಆಯ್ಕೆ ಮಾಡಿಕೊಂಡರು. ನಂತರ ದೆಹಲಿಯ ಶ್ರೀ ರಾಮ್ ಕಾಲೇಜ್ ಆಫ್ ಕಾಮರ್ಸ್ ನಲ್ಲಿ ಪ್ರವೇಶ ಪಡೆದರು. ಐಶ್ವರ್ಯಾ ಅವರ ತಂದೆ ಕರ್ನಲ್ ಅಜಯ್ ಕುಮಾರ್ ಎನ್ಸಿಸಿ ತೆಲಂಗಾಣ ಬೆಟಾಲಿಯನ್ನ ಕಮಾಂಡಿಂಗ್ ಆಫೀಸರ್. ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಅವರ ಹೆಸರನ್ನೇ ನನ್ನ ತಾಯಿ ನನಗೆ ನಾಮಕರಣ ಮಾಡಿದ್ದಾರೆ ಎಂದು ಐಶ್ವರ್ಯಾ ತಮ್ಮ ಸಂದರ್ಶನಗಳಲ್ಲಿ ಹಲವು ಬಾರಿ ಹೇಳಿದ್ದಾರೆ. ಮಿಸ್ ಇಂಡಿಯಾ 2017 ರ 21 ಫೈನಲಿಸ್ಟ್ಗಳಲ್ಲಿ ಐಶ್ವರ್ಯಾ ಆಯ್ಕೆಯಾದರು.