ನವದೆಹಲಿ, ಮಾ 20(DaijiworldNews/AA): ಒಬ್ಬ ವ್ಯಕ್ತಿ ಗುರಿ ಸಾಧಿಸಲು ನಿರ್ಧರಿಸಿದರೆ ಕಠಿಣ ಪರಿಶ್ರಮ ಪಡಲೇಬೇಕು. ಅಂತಹ ಛಲಬಿಡದೆ ತಮ್ಮ ಗುರಿ ಸಾಧಿಸಿದ ಐಎಎಸ್ ಅಧಿಕಾರಿ ನಮಿತಾ ಶರ್ಮಾರ ಯಶಸ್ವಿ ಕಥೆಯನ್ನು ನಾವಿಂದು ಅನಾವರಣ ಮಾಡುತ್ತಿದ್ದೇವೆ. ಅವರ ಸಾಧನೆಯ ಕಥೆ ಎಲ್ಲರಿಗೂ ಸ್ಪೂರ್ತಿಯಾಗಿದೆ.
ಅಂದಹಾಗೇ ನಮಿತಾ ಶರ್ಮಾರ ಯುಪಿಎಸ್ಸಿ ಪ್ರಯಾಣವು ತುಂಬಾ ಸವಾಲಿನಾದಾಗಿತ್ತು. ಅವರ ಸಾಧನೆಯ ಪ್ರಯಾಣದಲ್ಲಿ ಅನೇಕ ಬಾರಿ ವಿಫಲರಾಗಬೇಕಾಯಿತು.ನಮಿತಾ ಶರ್ಮಾ ಇಲೆಕ್ಟ್ರಾನಿಕ್ಸ್ ಅಂಡ್ ಕಂಮ್ಯುನಿಕೇಷನ್ ಇಂಜಿನಿಯರಿಂಗ್ ಪದವಿ ಪಡೆದಿದ್ದರು. ನಂತರದಲ್ಲಿ ಐಬಿಎಂ ಕಂಪನಿಗೆ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸಕ್ಕೆ ಸೇರಿ ಎರಡು ವರ್ಷ ಸೇವೆ ಸಲ್ಲಿಸಿದ್ದರು. ಆದರೆ ಈ ಕೆಲಸದಲ್ಲಿ ಸಂತೋಷವಾಗಿರಲು ಸಾಧ್ಯವಾಗಲಿಲ್ಲ. ನಂತರ ಈ ಕೆಲಸಕ್ಕೆ ರಾಜೀನಾಮೆ ನೀಡಿ ಯುಪಿಎಸ್ಸಿ ಪರೀಕ್ಷೆ ತಯಾರಿ ನಡೆಸಲು ನಿರ್ಧರಿಸಿದರು.
ನಮಿತಾ ಬೇಸಿಕಲಿ ಸಾಫ್ಟ್ವೇರ್ ಇಂಜಿನಿಯರ್ ಆದರೂ, ಅವರು ಯುಪಿಎಸ್ಸಿ ಸಿಎಸ್ಇ ಪರೀಕ್ಷೆಯನ್ನು 145ನೇ ರ್ಯಾಂಕ್ ನೊಂದಿಗೆ ಪಾಸಾದರು. ನಂತರ ಅವರು ಆಯ್ಕೆ ಮಾಡಿಕೊಂಡ ಸೇವೆ ಇಂಡಿಯನ್ ರೆವಿನ್ಯೂ ಸರ್ವೀಸ್. 2018 ನೇ ಬ್ಯಾಚ್ನಲ್ಲಿ ಸಿಎಸ್ಇ ಪರೀಕ್ಷೆ ಕ್ಲಿಯರ್ ಮಾಡಿ ಭಾರತದ ರೆವಿನ್ಯೂ ಸೇವೆಗೆ ಸೇರಿದರು.ಪ್ರಸ್ತುತ ಅವರು ಸೆಂಟ್ರಲ್ ಜಿಎಸ್ಟಿ ವಿಭಾಗದಲ್ಲಿ ಟ್ಯಾಕ್ಸ್ ಅಸಿಸ್ಟಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೌದು , ನಾಗರೀಕ ಸೇವೆಯಲ್ಲಿ ನಮಿತಾ 5 ಬಾರಿ ಫೇಲ್ ಆಗಿದ್ರು. ಹೆಚ್ಚಿನವರು ಎಷ್ಟೋ ಬಾರಿ ಫೇಲ್ ಆದ ನಂತರ ಭರವಸೆಯನ್ನೇ ಕಳೆದುಕೊಂಡು ಬಿಡುತ್ತಾರೆ. ಆದರೆ, ನಮಿತಾ ಅವರು ಐಎಎಸ್ ಅಧಿಕಾರಿ ಆಗಲೇಬೇಕೆಂದು ಪಣತೊಟ್ಟಿದ್ದರು. ಅದರ ಪ್ರತಿಫಲವೇ 7 ವರ್ಷಗಳ ನಂತರ ಅವರು ಕಠಿಣ ಪರಿಶ್ರಮದ ಫಲ ಪಡೆದರು.
ಯಶಸ್ಸು ಸಾಧಿಸುವ ಮೂಲಕ ಯುಪಿಎಸ್ಸಿ ಆಕಾಂಕ್ಷಿಗಳಿಗೆ ಪ್ರೇರಣೆಯಾದರು. ಈ ಹೋರಾಟದ ಪಯಣದಲ್ಲಿ ಅವರು ತಾಳ್ಮೆಯೇ ದೊಡ್ಡ ಅಸ್ತವಾಗಿತ್ತು. ಇಂತಹ ಸಾಧನೆಯ ಅಭ್ಯರ್ಥಿಗಳಿಗೆ ನಮಿತಾ ಶರ್ಮಾ ಯಶಸ್ಸಿನ ಸೂತ್ರವನ್ನು ತಿಳಿಸಿದ್ದಾರೆ. ತಾವು ಕೊನೆ ಯತ್ನದವರೆಗೂ ಭರವಸೆ ಬಿಟ್ಟುಕೊಡದೆ ನಿಮ್ಮೆಲ್ಲ ಶ್ರಮದಿಂದ ಪ್ರಯತ್ನ ಮಾಡುತ್ತಿರಬೇಕು. ಪಾಸಿಟಿವ್ ಮನೋಭಾವ ಇದ್ದರೆ ಜಗತ್ತಿನಲ್ಲಿ ಏನು ಬೇಕಾದರೂ ಮಾಡಬಹುದು ಎಂದು ಅವರು ಸಲಹೆ ನೀಡಿದ್ದಾರೆ.