ಹರಿಯಾಣ, ಮಾ 09 (DaijiworldNews/AK): ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕನ ಕುಟುಂಬದಲ್ಲಿ ಹುಟ್ಟಿ ಬೆಳೆದು ಶಿಕ್ಷಣ ಮುಗಿಸುವುದರಿಂದ ಹಿಡಿದು ಐಎಎಸ್ ಅಧಿಕಾರಿಯಾಗುವವರೆಗಿನ ಅಂಕಿತಾ ಚೌಧರಿ ಅವರ ಪಯಣ ಎಲ್ಲರಿಗೂ ಸ್ಫೂರ್ತಿದಾಯಕ.
ಪರಿಶ್ರಮ ಮತ್ತು ದೃಢಸಂಕಲ್ಪದಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಅಂಕಿತಾ ಅವರು ಉತ್ತಮ ಉದಾಹರಣೆ.ಹರಿಯಾಣದ ಮೆಹಮ್ ಜಿಲ್ಲೆಯವರಾದ ಅಂಕಿತಾ ಚೌಧರಿ. ಸಾಧಾರಣ, ಕೆಳಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಅಂಕಿತಾ ತಮ್ಮ ಶಾಲಾ ದಿನಗಳಿಂದಲೂ ತುಂಬಾನೇ ಪ್ರತಿಭಾವಂತ ವಿದ್ಯಾರ್ಥಿನಿ.
ಆದರೆ ದುರಂತ ಎಂದರೆ ಕಾರು ಅಪಘಾತದಲ್ಲಿ ಅಂಕಿತಾ ಅವರ ತಾಯಿ ನಿಧನರಾದರು, ಅದು ಅವರಿಗೆ ಅಘಾತ ಹಾಗೂ ನೋವು ಉಂಟುಮಾಡಿತ್ತು..ಬಳಿಕ ಸಕ್ಕರೆ ಕಾರ್ಖಾನೆಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ಅವರ ತಂದೆ ಯಾವಾಗಲೂ ಅವರನ್ನು ಚೆನ್ನಾಗಿ ಅಧ್ಯಯನ ಮಾಡಲು ಮತ್ತು ಸ್ವತಂತ್ರ ಮತ್ತು ಸ್ವಾವಲಂಬಿಯಾಗಲು ಬೆಂಬಲಿಸಿದರು.
ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ, ಅವರು ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಅಧ್ಯಯನ ಮಾಡಿ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ಆದರೆ, ಐಎಎಸ್ ಅಧಿಕಾರಿಯಾಗಬೇಕೆಂಬುದು ಅವರ ಬಾಲ್ಯದ ಕನಸು. ಅವರು ತಮ್ಮ ತನ್ನ ಸ್ನಾತಕೋತ್ತರ ಪದವಿಗಾಗಿ ಐಐಟಿ ದೆಹಲಿಗೆ ಸೇರಿದರೂ, ಅವರು ಯುಪಿಎಸ್ಸಿ ಪರೀಕ್ಷೆಗಾಗಿ ತಮ್ಮ ಸಮಗ್ರ ತಯಾರಿಯನ್ನು ಪ್ರಾರಂಭಿಸಿದರಂತೆ.
ತಮ್ಮ ತಾಯಿಯ ಮರಣದ ನಂತರ, ಅಂಕಿತಾ ಮಾನಸಿಕವಾಗಿ ಕುಗ್ಗಿಹೋಗಿದ್ದರು. ತಮ್ಮ ದಿವಂಗತ ತಾಯಿಯನ್ನು ಗೌರವಿಸುವ ಸಲುವಾಗಿ ಅವರು ಐಎಎಸ್ ಅಧಿಕಾರಿಯಾಗಲು ನಿರ್ಧರಿಸಿದರಂತೆ.ತಮ್ಮ ತಂದೆಯ ಅಚಲ ಬೆಂಬಲದೊಂದಿಗೆ, ಅಂಕಿತಾ ಅವರು ಶ್ರದ್ಧೆಯಿಂದ ಪರೀಕ್ಷೆಗೆ ತಯಾರಿ ನಡೆಸಿದರು ಮತ್ತು 2017 ರಲ್ಲಿ ತಮ್ಮ ಮೊದಲ ಪ್ರಯತ್ನವನ್ನು ನೀಡಿದರಂತೆ. ಆ ಮೊದಲ ಪ್ರಯತ್ನದಲ್ಲಿ ಅವರು ವಿಫಲರಾದರೂ.
ನಂತರ ಮತ್ತೆ ಪರೀಕ್ಷೆ ಬರೆದ ಅಂಕಿತಾ ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಲೇಬೇಕು ಅಂತ ನಿರ್ಧರಿಸಿದ್ದರು. . ಅವರ ಕಠಿಣ ಪರಿಶ್ರಮವು ಅವರ ಎರಡನೇ ಪ್ರಯತ್ನದಲ್ಲಿ ಫಲ ನೀಡಿತು. 2018 ರಲ್ಲಿ ನಡೆದ ಯುಪಿಎಸ್ಸಿ ಪರೀಕ್ಷೆಯಲ್ಲಿ 14ನೇ ರ್ಯಾಂಕ್ ಪಡೆಯುವುದರ ಮೂಲಕ ಪರೀಕ್ಷೆಯನ್ನು ಪಾಸ್ ಮಾಡಿದರು.