ಕೋಲ್ಕತ್ತ, ಮಾ06(DaijiworldNews/AK): ದೇಶದ ಮೊದಲ ಜಲ ಸುರಂಗದ ಮೆಟ್ರೊ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಾ. 6 ರಂದು ಚಾಲನೆ ನೀಡಿದರು.
ಬಳಿಕ ಜಲ ಸುರಂಗ ಮಾರ್ಗದಲ್ಲಿ ಶಾಲಾ ವಿದ್ಯಾರ್ಥಿಗಳ ಜೊತೆ ಪ್ರಯಾಣಿಸುವ ಮೂಲಕ ಪ್ರಧಾನಿ ಮೋ ದಿ ಅವರು ನೂತನ ಮೆಟ್ರೊ ಯೋಜನೆಯನ್ನು ಲೋಕಾರ್ಪಣೆ ಮಾಡಿದರು.
ಹೂಗ್ಲಿ ನದಿಯೊಳಗಿನ ಸುರಂಗಮಾರ್ಗದ ಮೂಲಕ ಹೌರಾ ಮತ್ತು ಎಸ್ಪ್ಲೇ ನೇಡ್ ನಡುವೆ ಮೆಟ್ರೊ ರೈಲು ಸಂಚರಿಸಲಿದೆ.ಕೋಲ್ಕತ್ತ ಮೆಟ್ರೊದ ಪೂರ್ವ -ಪಶ್ಚಿಮ ಕಾರಿಡಾರ್ ವ್ಯಾಪ್ತಿಯ ಈ ಯೋಜನೆಗೆ ಸುಮಾರು 4,965 ಕೋಟಿ ರೂ. ವೆಚ್ಚವಾಗಿದೆ.
ಈ ಸುರಂಗದ ಉದ್ದ 520 ಮೀಟರ್ ಆಗಿದೆ. ನೀರಿನೊಳಗೆ ಮೆಟ್ರೊ ರೈ ಲಿನ ಸರಾಸರಿ ಪ್ರಯಾಣದ ಅವಧಿ 45 ಸೆಕೆಂಡುಗಳು. ರೈಲುಗಳು ಸುರಂಗದಲ್ಲಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಚಲಿಸಬಹುದು ಎಂದು ಮೆಟ್ರೊ ಅಧಿಕಾರಿಗಳು ತಿಳಿಸಿದ್ದಾರೆ.