ಹೈದರಾಬಾದ್, ಮಾ 04(DaijiworldNews/AA): ಆಂಧ್ರ ಪ್ರದೇಶದಲ್ಲಿ ಓರ್ವ ಶಂಕಿತ ಉಗ್ರನನ್ನು ಎನ್ಐಎ ಬಂಧಿಸಿದೆ.
ಬಂಧಿತ ಶಂಕಿತ ಉಗ್ರನನ್ನು ತೆಲಂಗಾಣದ ಕಡಪ ಜಿಲ್ಲೆಯ ಮೈದುಕೂರು ಮಂಡಲಂ ಚೆರ್ಲೋಪಲ್ಲಿಯ ನಿಷೇಧಿತ ಪಿಎಫ್ಐ ಏಜೆಂಟ್ ಅಬ್ದುಲ್ ಸಲೀಂ ಎಂದು ಗುರುತಿಸಲಾಗಿದೆ.
ಅಬ್ದುಲ್ ಸಲೀಂ ನಿಷೇಧಿತ ಪಿಎಫ್ಐ ಸಂಘಟನೆಯ ಉತ್ತರ ತೆಲಂಗಾಣದ ಕಾರ್ಯದರ್ಶಿಯಾಗಿದ್ದಾನೆ. ಈತ ಕಳೆದ 25 ದಿನಗಳ ಹಿಂದೆ ಮೈದುಕೂರಿಗೆ ಆಗಮಿಸಿ ಮಸೀದಿಯೊಂದರಲ್ಲಿ ತಲೆಮರೆಸಿಕೊಂಡಿದ್ದ. ಜೊತೆಗೆ ಆನ್ಲೈನ್ ಮೂಲಕ ಫೋನ್ನಲ್ಲಿ ಮಾತನಾಡುತ್ತಿದ್ದ ಎನ್ನಲಾಗಿದೆ.
ಬಂಧಿತ ಶಂಕಿತ ಉಗ್ರನನ್ನು ಹೆಚ್ಚಿನ ವಿಚಾರಣೆಗಾಗಿ ಹೈದರಾಬಾದ್ಗೆ ಕರೆದುಕೊಂಡು ಹೋಗಲಾಗುತ್ತಿದೆ ಎಂದು ತಿಳಿದುಬಂದಿದೆ. ಇನ್ನು ಈತನಿಗೆ ಬೆಂಗಳೂರಿನ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟಕ್ಕೆ ಸಂಬಂಧವಿದೆಯೇ ಎಂದು ತನಿಖೆ ನಡೆಸುವ ಸಾಧ್ಯತೆ ಇದೆ.