ದೆಹಲಿ, ಮಾ 02(DaijiworldNews/AA): ಸೇವಾ ಶುಲ್ಕ ಪಾವತಿಸದ 10 ಭಾರತೀಯ ಕಂಪನಿಗಳ ಆ್ಯಪ್ ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ. ಇದೀಗ ಇದರ ಬೆನ್ನಲ್ಲೇ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಸೋಮವಾರದಂದು ಸಭೆ ನಡೆಸುತ್ತಿದ್ದು, ಸಭೆಗೆ ಗೂಗಲ್ ಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ.
ಸೇವಾ ಶುಲ್ಕ ಪಾವತಿಸದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಗೂಗಲ್ ಹೇಳಿತ್ತು. ಅದರಂತೆ ಭಾರತದ 10 ಆ್ಯಪ್ ಗಳನ್ನು ಪ್ಲೇ ಸ್ಟೋರ್ನಿಂದ ತೆಗೆದುಹಾಕಿದೆ. ಸೇವಾ ಶುಲ್ಕ ಪಾವತಿಯ ವಿವಾದವನ್ನು ಉಲ್ಲೇಖಿಸಿ ಭಾರತ್ ಮ್ಯಾಟ್ರಿಮೋನಿ ಮತ್ತು ಉದ್ಯೋಗ ಹುಡುಕಾಟ ಅಪ್ಲಿಕೇಶನ್ ನೌಕ್ರಿಯಂತಹ ಆ್ಯಪ್ ಗಳನ್ನು ತೆಗೆದುಹಾಕಲಾಗಿದೆ. ಈ ಹಿನ್ನೆಲೆ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಗೂಗಲ್ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವ ಅಶ್ವಿನಿ ವೈಷ್ಣವ್ ಅವರು, "ನನ್ನನ್ನು ಭೇಟಿಯಾಗುವಂತೆ ಈಗಾಗಲೇ ಗೂಗಲ್ ಪ್ರತಿನಿಧಿಗಳನ್ನು ಆಹ್ವಾನಿಸಿದ್ದೇನೆ. ನಮ್ಮ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯನ್ನು ರಕ್ಷಿಸಲು ನಾವು ಎಲ್ಲಾ ಅಗತ್ಯ ಕ್ರಮವನ್ನು ಕೈಗೊಳ್ಳುತ್ತೇವೆ. ಡಿಜಿಟಲ್ ಪಾವತಿಗೆ ಉತ್ತಮವಾಗಿ ಹೊಂದಿಕೊಳ್ಳುವ ಗೂಗಲ್ ಈ ವಿಷಯವನ್ನು ಸಮಂಜಸವಾಗಿ ನಿರ್ವಹಣೆ ಮಾಡುತ್ತದೆ" ಎಂದು ತಿಳಿಸಿದರು.