ಚೆನ್ನೈ, ಮಾ 1(DaijiworldNews/SK): 2024 ನೇ ಸಾಲಿನ ಲೋಕಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿಯಿದೆ. ಅಣ್ಣಾಮಲೈ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂಬ ಹೇಳಿದ ಮಾತು ಸುದ್ದಿಯಾಗುತ್ತಿದೆ. ಇದರ ಬೆನ್ನಲ್ಲೇ ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತೇನೆ ಎನ್ನುವುದು ಸುಳ್ಳು ಸುದ್ದಿ. ಆದರೆ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದು ತಮಿಳಿನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ತಿಳಿಸಿದ್ದಾರೆ.
ಈ ಬಗ್ಗೆ ಚೆನ್ನೈ ನಲ್ಲಿ ಸ್ಪಷ್ಟನೆ ನೀಡಿದ ಅವರು, ನಾಳೆ ಬೆಳಗ್ಗೆ ಪಕ್ಷ ನನಗೆ ಏನೇ ಹೇಳಿದರು ನಾನು ಅದನ್ನು ಮಾಡುತ್ತೇನೆ. ಊಹಾಪೋಹಗಳಿಗೆ ನಾನು ಉತ್ತರ ನೀಡುವುದಿಲ್ಲ. ನಮ್ಮ ಹಿರಿಯ ರಾಷ್ಟ್ರೀಯ ನಾಯಕತ್ವವು ಏನೇ ನಿರ್ಧರಿಸಿದರೂ ಅದನ್ನು ಪಾಲಿಸುವುದು ಮತ್ತು ಅದನ್ನು ಜಾರಿಗೆ ತರುವುದು ನನ್ನ ಕರ್ತವ್ಯವಾಗಿದೆ ಎಂದು ತಿಳಿಸಿದ್ದಾರೆ.
ಇಂದು ಪಕ್ಷವು ರಾಜ್ಯ ಮಟ್ಟದ ಎನ್ ಮಣ್ ಎನ್ ಮಕ್ಕಳ್ ಯಾತ್ರೆಯನ್ನು ಪೂರ್ಣಗೊಳಿಸಲು ನನ್ನನ್ನು ಕೇಳಿತ್ತು, ನಾವು ಅದನ್ನು ಮುಗಿಸಿದ್ದೇವೆ. ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯ ಬಗ್ಗೆ ಬಿಜೆಪಿ ನನಗೆ ಕೆಲವು ಜವಾಬ್ದಾರಿಯನ್ನು ನೀಡಿದೆ ಅದನ್ನು ನಾನು ಪೂರ್ಣಗೊಳಿಸುತ್ತಿದ್ದೇನೆ ಎಂದಿದ್ದಾರೆ.