ಬೆಂಗಳೂರು, ಮಾ 1(DaijiworldNews/SK): ಇಂದಿನಿಂದ (ಮಾ.1) ದ್ವಿತೀಯ ಪಿಯುಸಿ ಪರೀಕ್ಷೆಯು ಆರಂಭವಾಗಿದೆ. ಆದರೆ ಮೊದಲ ದಿನದಂದು ನಡೆದ ಕನ್ನಡ ಮತ್ತು ಆರೇಬಿಕ್ ಭಾಷಾ ಪರೀಕ್ಷೆಗೆ 18,231 ವಿದ್ಯಾರ್ಥಿಗಳು ಗೈರಾಗಿದ್ದಾರೆ ಎಂದು ವರದಿಯಾಗಿದೆ.
ಪರೀಕ್ಷೆಗೆ ರಾಜ್ಯಾದ್ಯಂತ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗಗಳಲ್ಲಿ 3,30,608 ಗಂಡು ಮಕ್ಕಳು ಮತ್ತು 3,67,958 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 6,98,566 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.
ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸುವ ಸಂಬಂಧ ರಾಜ್ಯಾದ್ಯಂತ 1,124 ಪರೀಕ್ಷಾ ಕೇಂದ್ರಗಳನ್ನು ನಿಗದಿಪಡಿಸಿದೆ. 540 ಜಿಲ್ಲಾ ಜಾಗೃತ ದಳ ಹಾಗೂ 3,108 ವಿಶೇಷ ಜಾಗೃತ ದಳದ ಸದಸ್ಯರನ್ನು ನೇಮಕ ಮಾಡಲಾಗಿದೆ.
ಇನ್ನು ಇಂದು ನಡೆದ ಕನ್ನಡ ಕನ್ನಡ ಮತ್ತು ಅರೇಬಿಕ್ ಭಾಷಾ ಪರೀಕ್ಷೆಗೆ 5,25,787 ವಿದ್ಯಾರ್ಥಿಗಳು ನೋಂದಣಿಯಾಗಿದ್ದು, 5,07,556 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ಮೂಲಕ ಹಾಜರಾತಿಯು ಶೇ.96.53ರಷ್ಟು ದಾಖಲಾಗಿದೆ.