ಅಗರ್ತಲಾ, ಫೆ 29 (DaijiworldNews/HR): ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಾಜಿ ಮಿಸ್ ಇಂಡಿಯಾ ತ್ರಿಪುರಾ ರಿಂಕಿ ಚಕ್ಮಾ(28) ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಿಂಕಿ ಚಕ್ಮಾ ಅವರನ್ನು ಫೆ.22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವ್ವನ್ನಪ್ಪಿದ್ದಾರೆ.
ಇನ್ನು ರಿಂಕಿ ಚಕ್ಮಾ ಅವರಿಗೆ 2022 ರಲ್ಲಿ ಮಾರಣಾಂತಿಕ ಫಿಲೋಡ್ಸ್ ಟ್ಯೂಮರ್ ಇರುವುದು ಪತ್ತೆಯಾಗಿದ್ದು, ಇದಕ್ಕೆ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಕಾಣಿಸಿಕೊಂಡ ಕ್ಯಾನ್ಸರ್ ಅವರ ಶ್ವಾಸಕೋಶಕ್ಕೆ ಹರಡಿತು. ಇದರ ಪರಿಣಾಮವಾಗಿ ಮೆದುಳಿನ ಗೆಡ್ಡೆ ಉಂಟಾಗಿತ್ತು
ರಿಂಕಿ ಚಕ್ಮಾ ಅವರು 2017 ರಲ್ಲಿ ಮಿಸ್ ಇಂಡಿಯಾ ತ್ರಿಪುರಾ ಕಿರೀಟವನ್ನು ಗೆದ್ದಿದ್ದರು.