ಛಿಂದ್ವಾರಾ, ಫೆ 29 (DaijiworldNews/HR): ನಾನು ನಿಮ್ಮ ಮೇಲೆ ಹೇರಿಕೆಯಾಗುವುದಿಲ್ಲ, ನೀವು ಬಯಸಿದರೆ ನಾನು ಪಕ್ಷ ತೊರೆಯುತ್ತೇನೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಬುಧವಾರ ಪಕ್ಷದ ಕಾರ್ಯಕರ್ತರನ್ನುದ್ದೇಶಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ನಾನು ಹಲವು ವರ್ಷಗಳಿಂದ ನಿಮ್ಮ ಪ್ರೀತಿ ಮತ್ತು ವಿಶ್ವಾಸವನ್ನು ಗಳಿಸಿದ್ದೇನೆ ಎಂದರು. ಕಮಲ್ ನಾಥ್ ಅವರಿಗೆ ಬೀಳ್ಕೊಡಲು ಬಯಸಿದರೆ, ಅದು ನಿಮ್ಮ ಆಯ್ಕೆಯಾಗಿದೆ. ನಾನು ಹೊರಡಲು ಸಿದ್ಧ. ನಾನು ಹೇರಿಕೆಯಾಗಲು ಬಯಸುವುದಿಲ್ಲ. ಇದು ನಿಮ್ಮ ಆಯ್ಕೆಯ ವಿಷಯ ಎಂದರು.
ಇನ್ನು ಈ ಸ್ಥಾನದಿಂದ ನಕುಲ್ ಮತ್ತೆ ಸ್ಪರ್ಧಿಸಲಿದ್ದಾರೆ ಎಂದು ಹಿರಿಯ ನಾಯಕ ಕಮಲ್ ನಾಥ್ ಈಗಾಗಲೇ ಘೋಷಿಸಿದ್ದರು.