ನವದೆಹಲಿ, ಫೆ 28 (DaijiworldNews/HR): ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಮೈತ್ರಿಕೂಟ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದರೆ ಭಾರತ ಇನ್ನಷ್ಟು ಸುಧಾರಣೆಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಭಾರತವು ಮುಂದುವರಿದ ದೇಶವಾಗಲು ಬಹಳ ಅಗತ್ಯ ಇರುವಂತಹ ಭೂಮಿ, ಬಂಡವಾಳ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೊಡ್ಡ ಸುಧಾರಣೆಗೆ ಒತ್ತು ನೀಡಲಾಗುತ್ತದೆ ಎಂದರು.
ಇನ್ನು ಮೋದಿ ಸರ್ಕಾರಕ್ಕೆ ಮೂರನೇ ಅವಧಿ ಅಧಿಕಾರ ಸಿಕ್ಕಿದರೆ ಮುಂದಿನ ತಲೆಮಾರಿನ ಸುಧಾರಣೆಗಳನ್ನು ಜಾರಿಗೆ ತರುವುದು ಆದ್ಯತೆ ಆಗಿರುತ್ತದೆ ಎಂದು ಹೇಳಿದ್ದಾರೆ.