ಹರಿಯಾಣ, ಫೆ 28(Daijiworldnews/SK): ಪ್ರತಿಯೊಬ್ಬರಲ್ಲೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಬೇಕೆಂಬ ತುಡಿತ ಇರುವುದಂತು ಸತ್ಯ. ಆದರೆ ಇಲ್ಲೊಬ್ಬರು ತಮ್ಮ ಕುಟುಂಬದ ಸಂಪ್ರದಾಯದ ತಲೆಬಾಗದೇ ತಂದೆಯ ಕನಸನ್ನು ನನಸಾಗಿಸಲು ಪಣತೊಟ್ಟು ಯುಪಿಎಸ್ ಸಿ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಪೂಜಾ ಹೂಡಾ ಯಶೋಗಾಥೆ.
ಪೂಜಾ ಹೂಡ ಅವರು ಹರಿಯಾಣದ ಬಹುದುರ್ಗರ್ ಎಂಬ ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಅವರ ತಂದೆ ದೆಹಲಿ ಸಾರಿಗೆ ನಿಗಮದ ಒಬ್ಬ ಸಾಮಾನ್ಯ ಬಸ್ ಕಂಡಕ್ಟರ್. ಪೂಜಾ ತಮ್ಮ ಶಾಲಾ ಹಂತದಿಂದಲೂ ಜಾಣ ವಿದ್ಯಾರ್ಥಿನಿಯಾಗಿದ್ದರು.
ಆದರೆ ಪೂಜಾ ಹೂಡ ಪೂಜಾ ಹೂಡ' ಅವರ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಕಿರಿಯ ವಯಸ್ಸಿನಲ್ಲಿಯೇ ಮದುವೆ ಮಾಡಿ ಕಳುಹಿಸುವ ಸಂಪ್ರದಾಯವಿದೆ. ಆದರೆ ಪೂಜಾ ಅವರ ತಂದೆಗೆ ಮಗಳನ್ನು ಐಎಎಸ್ ಆಫೀಸರ್ ಆಗಿ ನೋಡಬೇಕೆಂಬ ಕಾರಣದಿಂದ ಈ ಎಲ್ಲಾ ಸಂಪ್ರದಾಯಗಳಿಗೆ ಒತ್ತು ನೀಡಲಿಲ್ಲ. ಬಸ್ ಕಂಡಕ್ಟರ್ ಆದರೂ ಸಹ ಅವರ ಮಕ್ಕಳ ಶಿಕ್ಷಣಕ್ಕೆ, ಅವರ ಕನಸು ನನಸು ಮಾಡಲು ಹುರಿದುಂಬಿಸುತ್ತಿದ್ದರು.
ತಂದೆಯ ಕನಸಿನಂತೆ ಪೂಜಾ ಅವರು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಿದ್ದತೆಯನ್ನು ನಡೆಸಿ, ಪರೀಕ್ಷೆ ಬರೆಯಲು ಮುಂದಾದರು. ಆದರೆ ಅವರಿಗೆ ಮೊದಲ ಯತ್ನದಲ್ಲಿ ಯಶಸ್ಸನ್ನು ಕಾಣಲು ಸಾಧ್ಯವಾಗಲಿಲ್ಲ.
ಆದರೂ ಕುಗ್ಗದೇ ಮರು ಯತ್ನಿಸಿ 2017ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ರ್ಯಾಂಕ್'ನಲ್ಲಿ 288 ನೇ ಸ್ಥಾನ ಗಳಿಸಿ ಐಎಎಸ್ ಆಫೀಸರ್ ಆಗಿ ಹೊರಹೊಮ್ಮಿದರು. ಈ ಮೂಲಕ ಯುವಜನತೆಗೆ ಪ್ರೇರಣೆಯಾಗಿದ್ದಾರೆ.