ನವದೆಹಲಿ, ಫೆ 27(DaijiworldNews/SK): ರಾಷ್ಟ್ರೀಯ ಮಾದರಿ ಸಮೀಕ್ಷೆ ಕಚೇರಿ ಶನಿವಾರ 2022-23ರ ಮನೆ ಬಳಕೆಯ ವೆಚ್ಚದ ಅಂಕಿಅಂಶ ಬಿಡುಗಡೆ ಮಾಡಿದೆ. ಇದೀಗ ಈ ವಿಚಾರವನ್ನು ಕಾಂಗ್ರೆಸ್ ಕಟುವಾಗಿ ಟೀಕಿಸಿದೆ.
ಈ ಅಂಕಿಅಂಶ ಬಿಡುಗಡೆ ‘ಚುನಾವಣಾ ಪ್ರೇರಿತ’ವಾಗಿ ಅಭಿಪ್ರಾಯ ರೂಪಿಸಲು ಮಾಡಿರುವ ಬೋಗಸ್ ವರದಿಯಾಗಿದೆ. ದೇಶದ ಆರ್ಥಿಕತೆಯ ಅಂಕಿಅಂಶಗಳ ವಿಶ್ವಾಸಾರ್ಹತೆಯನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಾಶಪಡಿಸುತ್ತಿದೆ’ ಎಂದು ಆರೋಪಿಸಿದೆ.
ಈ ವರದಿ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಖರ್ಗೆ ಅವರು, ‘ಗೃಹ ಬಳಕೆಯ ವೆಚ್ಚ ಸಮೀಕ್ಷೆ ವರದಿಯಲ್ಲಿ ತೋರಿಸಿರುವಂತೆ ದೇಶದಲ್ಲಿ ಎಲ್ಲವೂ ಹೊಳೆಯುತ್ತಿದ್ದರೆ, ಗ್ರಾಮೀಣ ಭಾರತದ ಶೇ 5ರಷ್ಟು ಬಡವರು ನಿತ್ಯ ಕೇವಲ 46 ರೂ ಖರ್ಚಿನಲ್ಲಿ ಬದುಕಬೇಕಾಗಿದೆ? ಮೋದಿ ಸರ್ಕಾರ ಇಂತಹ ಸಮೀಕ್ಷೆಯಲ್ಲಿ ಬೆನ್ನು ತಟ್ಟಿಕೊಳ್ಳುವ ವಿಫಲ ಯತ್ನ ನಡೆಸಿದೆ’ ಎಂದು ವ್ಯಂಗ್ಯವಾಡಿದ್ದಾರೆ.
ಇನ್ನು ಪ್ರಮುಖವಾಗಿ ಕೇಂದ್ರ ಸರ್ಕಾರ ಜಾತಿ ಸಮೀಕ್ಷೆಯ ನಿಖರ ಫಲಿತಾಂಶಕ್ಕಾಗಿ ಶೀಘ್ರವೇ ಜನಗಣತಿ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.