ಬೆಂಗಳೂರು, ಫೆ 27(DaijiworldNews/SK): ಬೆಂಗಳೂರಿನ ಟೆಕಿಯೊಬ್ಬರು ಆಪಲ್ ವಾಚ್ ಮೂಲಕ ಸಹಜಕ್ಕಿಂತ ಹೆಚ್ಚಿನ ಹೃದಯ ಬಡಿತದ ಸೂಚನೆ ಅರಿತು ಹೃದ್ರೋಗ ತಜ್ಞರಲ್ಲಿ ಪರೀಕ್ಷಿಸಿಕೊಂಡು ಮುಂದಾಗಬಹುದಾಗಿದ್ದ ಅಪಾಯದಿಂದ ಪಾರಾದ ಘಟನೆ ವರದಿಯಾಗಿದೆ.
ಬೆಂಗಳೂರಿನ ಸಾಫ್ಟ್ ವೇರ್ ಡೆವಲಪರ್ ಶರತ್ ಶ್ರೀರಾಮ್(೨೫ ) ಅಪಾಯದಿಂದ ಪಾರದ ವ್ಯಕ್ತಿ.
ಶರತ್ ಅವರು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಆಪಲ್ ವಾಚ್ ಸಹಾಯ ಮಾಡಿದ್ದಕ್ಕಾಗಿ, ಆಪಲ್ ಸಿಇಒ ಟಿಮ್ ಕುಕ್ ಅವರಿಗೆ ಇಮೇಲ್ ಮೂಲಕ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಪತ್ರದಲ್ಲಿ ನಾನು ಆಪಲ್ ವಾಚ್ ರೀಡಿಂಗ್ ಗಳನ್ನು ಅನುಸರಿಸದಿದ್ದರೆ ಮತ್ತು ವೈದ್ಯರ ಬಳಿಗೆ ಹೋಗದಿದ್ದರೆ, ನನ್ನ ಆರೋಗ್ಯ, ಹದಗೆಡುತ್ತಿತ್ತು. ಕೆಲವು ತಿಂಗಳುಗಳಲ್ಲಿ ಇತರ ಗಂಭೀರ ಸಮಸ್ಯೆಗಳು ಉಂಟಾಗುತ್ತಿದ್ದವು” ಎಂದು ಶರತ್ ಪತ್ರದಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಆಪಲ್ ವಾಚ್ ನಲ್ಲಿ ಆಪ್ಟಿಕಲ್ ಹಾರ್ಟ್ ಸೆನ್ಸರ್ ಫೋಟೊಪ್ಲೆಥಿಸ್ಮೋಗ್ರಫಿ ಎಂಬ ತಂತ್ರಜ್ಞಾನವಿದ್ದು, ಹೃದಯ ಸಂವೇದಕವು ಪ್ರತಿ ನಿಮಿಷಕ್ಕೆ 30 ರಿಂದ 210 ರವರೆಗಿನ ಬಡಿತಗಳವರೆಗೂ ಕೆಲಸ ನಿರ್ವಹಿಸುತ್ತದೆ.