ಕಲಬುರಗಿ, ಫೆ 26 (DaijiworldNews/HR): ಪ್ರಧಾನಿ ನರೇಂದ್ರ ಮೋದಿ ಅವರು ದ್ವಾರಕಾಕ್ಕೆ ತೆರಳಿ ನವಿಲು ಗರಿ ಸಮರ್ಪಿಸುವು ಮೂಲಕ ಶ್ರೀಕೃಷ್ಣನಿಗೆ ವಿಶೇಷ ಪಾರ್ಥನೆ ಸಲ್ಲಿರುವುದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯವಾಡಿದ್ದಾರೆ.
ಮೋದಿ ಅವರು ಸ್ಕೂಬಾ ಡೈವಿಂಗ್ ಮುಖಾಂತರ ಆಳವಾದ ಸಮುದ್ರಕ್ಕಿಳಿದು ಮುಳುಗಡೆಯಾಗಿದ್ದ ಪ್ರಾಚೀನಾ ದ್ವಾರಕೆಗೆ ಪ್ರಾರ್ಥನೆ ಸಲ್ಲಿಸಿದ್ದಾರೆ.
ಇನ್ನು ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ನೀರಿನಲ್ಲಿ ಮುಳುಗಿ ದ್ವಾರಕಾ ನಗರದಲ್ಲಿ ಪ್ರಾರ್ಥನೆ ಮಾಡುವುದು ನನಗೆ ಒಲಿದ ಅತ್ಯಂತ ದಿವ್ಯ ಹಾಗೂ ಸುಂದರ ಅನುಭವವಾಗಿತ್ತು ಎಂದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಖರ್ಗೆ, ನವಿಲುಗರಿ ಅಲ್ಲಿ ಹಾಕಿದರೆ ಬೆಳೆಯುತ್ತೋ ಇಲ್ಲವೋ ಗೊತ್ತಿಲ್ಲ. ನಿಸರ್ಗದ ನಿಯಮದ ಪ್ರಕಾರ ನವಿಲುಗರಿ ಬೆಳೆಯುತ್ತಾ ಗೊತ್ತಿಲ್ಲ. ನಾನು ನಂಬಿರುವ ನಿಸರ್ಗದ ನಿಯಮದ ಪ್ರಕಾರ ನಡೆಯಬೇಕು. ನಿಸರ್ಗದ ವಿರುದ್ಧ ಹೋದವರಿಗೆ ಯಶಸ್ಸು ಸಿಗಲ್ಲ. ಇದು ಬುದ್ಧನ ತತ್ವ ಎಂದು ಹೇಳಿದ್ದಾರೆ.