ಮೈಸೂರು, ಫೆ 25(DaijiworldNews/MS): ದೇಶದ ಎಲ್ಲಾ ಚುನಾವಣೆಗಳಿಗೆ ಅಳಿಸಲಾಗದ ಇಂಕ್ ಬಾಟಲ್ ಯನ್ನು 1962ರಿಂದಲೂ ಪೂರೈಸುತ್ತಾ ಬಂದಿರುವ ಸರ್ಕಾರಿ ಸ್ವಾಮ್ಯದ ಮೈಲ್ಯಾಕ್(ಮೈಸೂರು ಅರಗು ಮತ್ತು ಬಣ್ಣದ ಕಾರ್ಖಾನೆ)ಗೆ 2024ರ ಲೋಕಸಭಾ ಚುನಾವಣೆಗೆ ಶಾಯಿ ಪೂರೈಕೆ ಮಾಡುವಂತೆ ಚುನಾವಣಾ ಆಯೋಗವು ತಿಳಿಸಿದೆ.
ಲೋಕಸಭೆ ಚುನಾವಣೆಗೆ ಎರಡು ತಿಂಗಳು ಬಾಕಿ ಇರುವಂತೆ 10 ಎಂಎಲ್ ಪ್ರಮಾಣದ 26.55 ಲಕ್ಷ ಶಾಯಿ ಬಾಟಲುಗಳನ್ನು ಪೂರೈಸುವಂತೆ ಶಾಯಿ ತಯಾರಿಸುವ ದೇಶದ ಏಕಮಾತ್ರ ಸಂಸ್ಥೆಯಾಗಿರುವ ಮೈಸೂರು ಮೈಲ್ಯಾಕ್ ಗೆ ಆಯೋಗ ತಿಳಿಸಿದೆ.
ಅಳಿಸಲಾಗದ ಈ ಶಾಯಿಯನ್ನು ಮೈಸೂರು ಪೇಂಟ್ಸ್ ಅಂಡ್ ವಾರ್ನಿಷ್ ಲಿಮಿಟೆಡ್ ತಯಾರಿಸುತ್ತದೆ. 10 ಎಂಎಲ್ನ ಒಂದು ಬಾಟಲಿಯಿಂದ 700 ಮತದಾರರ ಬೆರಳಿಗೆ ಶಾಯಿ ಗುರುತು ಹಾಕಬಹುದು.
1937ರಲ್ಲಿ ನಾಲ್ವ ಡಿ ಕೃಷ್ಣ ರಾಜ ಒಡೆಯರ್ ಮೈಸೂರು ಅರಗು ಮತ್ತು ಬಣ್ಣ ದ ಕಾರ್ಖಾನೆಯನ್ನು ಸ್ಥಾಪಿಸಿದ್ದು, 1962ರಲ್ಲಿಆರಂಭವಾದ ಅಳಿಸಲಾಗದ ಶಾಯಿ ತಯಾರಿಕೆ ವಿಶ್ವವಿಖ್ಯಾ ತಿ ಮನ್ನಣೆ ಪಡೆದಿದೆ.
ದೇಶಾದ್ಯಂತ ಮಾತ್ರವಲ್ಲದೇ ಹೊರದೇಶಕ್ಕೂ ಇಲ್ಲಿಂದಲೇ ಶಾಯಿ ಪೂರೈಕೆ ಮಾಡಲಾಗುತ್ತದೆ. ಕಾಂಬೋಡಿಯಾ, ಬರ್ಕಿ ನಾ, ಫಾಸೋ , ಫಿಜಿ ಐಲ್ಯಾಂಡ್, ಪಾಪುವನ್ಯೂಗುನ್ನಿಯಾ, ಟರ್ಕಿ , ಸೌತ್ ಆಫ್ರಿಕಾ,ಮಂಗೋಲಿಯಾ ಸೇರಿದಂತೆ ಪ್ರಪಂಚದ 30ಕ್ಕೂ ಹೆಚ್ಚು ರಾಷ್ಟ್ರಗಳ ಸಾರ್ವತ್ರಿ ಕ ಚುನಾವಣೆಗೂ ಇಲ್ಲಿಯ ಅಳಿಸಲಾಗದ ಶಾಯಿ ರವಾನಿಸಲಾಗಿದೆ.