ನವದೆಹಲಿ, ಫೆ 25(DaijiworldNews/ AK):ಬಡವರಿಗೆ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರದ ಮಹಾತ್ವಾಕಾಂಕ್ಷೆ ಯೋಜನೆಯಾದ ಆಯುಷ್ಮಾನ್ ಭಾರತ್ ಪಿಎಂಜೆವೆವೈ ಸಿಎಂ ಯೋಜನೆಗೆ ರಾಜ್ಯದಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೋಂದಣಿಯಾಗಿಲ್ಲ ಎನ್ನಲಾಗುತ್ತಿದೆ.
ಸರ್ವರಿಗೂ ಉಚಿತ ಆರೋಗ್ಯ ಸೇವೆ ಸಿಗಲಿ ಎಂಬ ಉದ್ದೇಶದಿಂದ 2018ರಲ್ಲಿ ಆಯುಷ್ಮಾನ್ ಭಾರತ್ ಪಿಎಂಜೆಎವೈ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಜಾರಿ ಮಾಡಿದೆ.
ಕಳೆದ ಎರಡು ವರ್ಷಗಳ ಹಿಂದೆ ರಾಜ್ಯದಲ್ಲಿ ಮರುನಾಮಕರಣ ಮಾಡಿ ಮತ್ತೊಮ್ಮೆ ಜಾರಿ ಮಾಡಲಾಯಿತು. ಆದರೆ ನೋಂದಣಿ ಮಾತ್ರ ಶೇಕಡ 31 ರಷ್ಟು ಮಾತ್ರ ಆಗಿರುವುದು ನಿಜಕ್ಕೂ ವಿಪರ್ಯಾಸ ಸರಿ.
ರಾಜ್ಯದಲ್ಲಿ ಈವರೆಗೂ 1ಕೋಟಿ 546ಲಕ್ಷ ರೂ. ಜನರು ನೋಂದಣಿ ಮಾಡಿಸಿದ್ದಾರೆ. ಇನ್ನೂ 3ಕೋಟಿ 56 ಲಕ್ಷ ರೂ. ಜನರ ನೋಂದಣಿ ಬಾಕಿ ಇದೆ.
ಎಲ್ಲಿ ಯೋಜನೆ ನೋಂದಣಿಗೆ ಅವಕಾಶ:
ಗ್ರಾಮ ಓನ್, ಕಾಮನ್ ಸವೀಸ್ ಸೆಂಟರ್ ಸೇರಿ ಆರೋಗ್ಯ ಕೇಂದ್ರಗಳಲ್ಲಿ ನೋಂದಣಿ ಮಾಡಲಾಗುತ್ತದೆ.ಕೇವಲ ಆಧಾರ್ ಕಾರ್ಡ್, ಬಿಪಿಎಲ್ ಹಾಗೂ ಆಧಾರ್ ನಂಬರ್ಗೆ ಲಿಂಕ್ ಇರುವ ಮೊಬೈಲ್ ನಂಬರ್ ಇದ್ದರೆ ನೋಂದಣಿ ಮಾಡಬಹುದು. ಆದರೆ ಕೆಲವು ನಿಮಿಷಗಳಲ್ಲಿ ನಡೆಯುವ ನೋಂದಣಿ ಕಾರ್ಯಕ್ಕೂ ಜನ ಮುಂದಾಗುತ್ತಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಈ ಬಗ್ಗೆ ಜಿಲ್ಲಾಡಳಿತ, ಗ್ರಾಮಗಳಲ್ಲಿ ಅಭಿಯಾನ ಮಾಡಿದ್ರೆ ಉತ್ತಮ ಸ್ಪಂದನೆ ಸಿಗಬಹುದು ಎನ್ನುತ್ತಾರೆ ಅಧಿಕಾರಿಗಳು.