ನವದೆಹಲಿ, ಫೆ 25(DaijiworldNews/ AK):ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿಶೇಷವಾಗಿ ಗುಜರಾತ್ನ ಓಕಾನಿಂದ ಬೇಟಾ ದ್ವಾರಕಾ ವರೆಗಿನ 2.32 ಕಿ.ಮೀ. ಉದ್ದದ ಕೇಬಲ್ ಶೈಲಿಯಲ್ಲಿ ನಿರ್ಮಿಸಲಾಗಿರುವಸೇತುವೆಯನ್ನು ಲೋಕರ್ಪಣೆ ಮಾಡಲಿದ್ದಾರೆ.
ಗುಜರಾತ್ನಲ್ಲಿ ಸುಮಾರು 52,250 ಕೋಟಿ ರೂ. ಮೌಲ್ಯದ ವಿವಿಧ ಹಲವು ಅಭಿವೃದ್ಧಿ ಕಾಮಗಾರಿ ಗಳಿಗೆ ಚಾಲನೆ ನೀಡಲಿದ್ದಾರೆ.
ಈ ಕುರಿತು ಶನಿವಾರ ಮೋದಿ ಅವರು ಟ್ವೀಟ್ ಮಾಡಿ ನಾಳೆ ಗುಜರಾತ್ ಅಭಿವೃದ್ಧಿಯಲ್ಲಿ ವಿಶೇಷ ದಿನ. ಉದ್ಘಾಟನೆ ಮಾಡಲಿರುವ ಹಲವು ಯೋಜನೆಗಳ ಪೈಕಿ ಓಖಾದಿಂದ ಬೇಟ್ ದ್ವಾರಕಾಗೆ ಸುದರ್ಶನ ಸೇತು ಕೂಡ ಒಂದು. ಇದು ಹಲವು ವೈಶಿಷ್ಟಗಳನ್ನು ಹೊಂದಿದೆ ಎಂದು ಬರೆದು ಕೊಂಡಿದ್ದಾರೆ.
ಇದಲ್ಲದೆ ರಾಜ್ಕೋಟ್, ಭಟಿಂಡಾ (ಪಂಜಾಬ್), ರಾಯ್ಬರೇಲಿ (ಉ.ಪ್ರ.), ಕಲ್ಯಾಣಿ (ಪಶ್ಚಿಮ ಬಂಗಾಲ), ಮಂಗಳ ಗಿರಿ(ಆಂಧ್ರ ಪ್ರದೇಶ)ದಲ್ಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆ ಗಳನ್ನೂ ಅವರು ಉದ್ಘಾಟಿಸಲಿದ್ದಾರೆ.