ಬೆಂಗಳೂರು, ಫೆ 23 (DaijiworldNews/HR): ಕರ್ನಾಟಕದ ಗೌರವ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ? ಈ ರಾಜ್ಯದ ಸರ್ಕಾರವನ್ನ ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದಿರಾ? ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.
ವಿಧಾನಪರಿಷತ್ ನಲ್ಲಿ ಅಮ್ಮಾ.. ತಾಯಿ.. 6 ಸಾವಿರ ಕೋಟಿ ಕೊಡು ತಾಯಿ ಅಂತ ಬೇಡ್ತಾ ಸಿಎಂ ಪ್ರಸ್ತಾಪ ಮಾಡಿದ್ದು, ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಇನ್ನು ಕೆಲವರು ಮನೆಗಳ ಮುಂದೆ ಹೋದಾಗ ರಾತ್ರಿ ಊಟ ಉಳಿದಿದ್ರೆ ಕೊಡಿ ಅಂತಾ ಭಿಕ್ಷೆ ಕೇಳ್ತಾರೆ, ಅದೇ ರೀತಿ ಸಿಎಂ ಕೇಳ್ತಿದ್ದಾರೆ. ಹಸಿವನ್ನ ನೀಗಿಸಿಕೊಳ್ಳಲು ಹೋಗುವ ಜನ ಅಮ್ಮಾ.. ತಾಯಿ ಕೊಡಿ ಅಂತಾ ಕೇಳ್ತಾರೆ ಎಂದರು.